ಬೆಂಗಳೂರು: ಅಮೆರಿಕದ ಮಾಹಿತಿ ತಂತ್ರಜ್ಞಾನ ಕಂಪನಿ ಸೇಲ್ಸ್ಪೋರ್ಸ್ ಮತ್ತು ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಏಥರ್ ಎನರ್ಜಿ ಒಪ್ಪಂದಕ್ಕೆ ಸಹಿ ಹಾಕಿವೆ.

ಡೀಲರ್ಶಿಪ್ ಕಾರ್ಯಾಚರಣೆ ಮತ್ತು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸಲು ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಸೇಲ್ಸ್ಫೋರ್ಸ್ನೊಂದಿಗಿನ ಈ ಸಹಯೋಗವು ಮಾರಾಟ, ಸೇವೆ ಮತ್ತು ಡೀಲರ್ ಕಾರ್ಯಾಚರಣೆಯನ್ನು ಒಟ್ಟುಗೂಡಿಸುತ್ತದೆ ಎಂದು ಜಂಟಿಯಾಗಿ ತಿಳಿಸಿವೆ.

ಏಥರ್ ಎನರ್ಜಿಯು ದೇಶದಾದ್ಯಂತ 350 ವಿತರಕರನ್ನು ಹೊಂದಿದೆ. ಮುಂಬರುವ ತಿಂಗಳುಗಳಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಲು ಎದುರು ನೋಡುತ್ತಿದೆ. ಸೇಲ್ಸ್ಫೋರ್ಸ್ ಸಹಯೋಗದೊಂದಿಗೆ ನಿರ್ಮಿಸಲಾದ ಈ ರೀತಿಯ ಮೊದಲ ಡೀಲರ್ ಮ್ಯಾನೇಜ್ಮೆಂಟ್ ಸಲ್ಯೂಷನ್ ಮೊಬೈಲ್ ಅಪ್ಲಿಕೇಷನ್ನಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ.

ಏಥರ್ ಎನರ್ಜಿ ಮತ್ತು ಸೇಲ್ಸ್ಫೋರ್ಸ್ ವೇದಿಕೆಯಲ್ಲಿ ಮುಂದಿನ ಪೀಳಿಗೆಯ ಡೀಲರ್ ಮ್ಯಾನೇಜ್ಮೆಂಟ್ ಸಿಸ್ಟಂ (ಡಿಎಂಎಸ್) ‘ಏಥರ್ ಡೀಲರ್ ಸೆಂಟ್ರಲ್’ ಅನ್ನು ನಿರ್ಮಿಸಿದೆ. ಈ ವ್ಯವಸ್ಥೆಯು ಎಲ್ಎಂಎಸ್ (ಲೀಡ್ ಮ್ಯಾನೇಜ್ಮೆಂಟ್ ಸಿಸ್ಟಂ), ಸಿಆರ್ಎಂ (ಕಸ್ಟಮರ್ ರಿಲೇಷನ್ಶಿಪ್ ಮ್ಯಾನೇಜ್ಮೆಂಟ್) ಮತ್ತು ಡಿಎಂಎಸ್ ಅನ್ನು ಒಂದೇ ಸ್ಕೇಲೆಬಲ್ ವೇದಿಕೆಯಲ್ಲಿ ಸಂಯೋಜಿಸುತ್ತದೆ ಎಂದು ತಿಳಿಸಿದೆ.

‘ಸೇಲ್ಸ್ಫೋರ್ಸ್ ಜೊತೆಗಿನ ಈ ಸಹಯೋಗ ನಮ್ಮ ಹೊಸ ಡೀಲರ್ ನಿರ್ವಹಣಾ ವ್ಯವಸ್ಥೆಯಾದ ‘ಏಥರ್ ಡೀಲರ್ ಸೆಂಟ್ರಲ್’ ಅನುಷ್ಠಾನವು ಇ.ವಿ ಡೀಲರ್ ಶಿಪ್ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಮರುಕಲ್ಪಿಸುತ್ತದೆ. ಏಥರ್ ಡೀಲರ್ ಸೆಂಟ್ರಲ್ ಒಂದು ಏಕೀಕೃತ ವೇದಿಕೆಯಾಗಿದ್ದು, ತಡೆರಹಿತವಾಗಿ ಸಂಪರ್ಕ ಒದಗಿಸುತ್ತದೆ’ ಎಂದು ಏಥರ್ ಎನರ್ಜಿಯ ಮುಖ್ಯ ವ್ಯವಹಾರ ಅಧಿಕಾರಿ ರವ್ನೀತ್ ಎಸ್. ಫೋಕೆಲಾ ಹೇಳಿದ್ದಾರೆ.

‘ಏಥರ್ ಎನರ್ಜಿಯೊಂದಿಗಿನ ನಮ್ಮ ಸಹಭಾಗಿತ್ವವು ತಂತ್ರಜ್ಞಾನದ ಚಲನಶೀಲತೆಯನ್ನು ಹೇಗೆ ಮರುವ್ಯಾಖ್ಯಾನಿಸಬಹುದು ಎಂಬುದನ್ನು ತೋರಿಸುತ್ತದೆ. ಸೇಲ್ಸ್ಫೋರ್ಸ್ನ ಸೇವೆ ಬಳಸಿಕೊಳ್ಳುವ ಮೂಲಕ, ಏಥರ್ ಡೀಲರ್ಶಿಪ್ ನಿರ್ವಹಣೆ ಮತ್ತು ಗ್ರಾಹಕರ ತೊಡಗಿಸಿಕೊಳ್ಳುವಿಕೆಗೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತಿದೆ’ ಎಂದು ಸೇಲ್ಸ್ಫೋರ್ಸ್ ಇಂಡಿಯಾದ ಹಣಕಾಸು ಸೇವೆ ಮತ್ತು ಗ್ರಾಹಕ ಕೈಗಾರಿಕೆಗಳ ಉಪಾಧ್ಯಕ್ಷ ಮನ್ಕಿರಣ್ ಚೌಹಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.