ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲ: ಪರಿಶೀಲನೆಗೆ ಉಪಗ್ರಹ ಚಿತ್ರ

Last Updated 25 ಆಗಸ್ಟ್ 2020, 13:43 IST
ಅಕ್ಷರ ಗಾತ್ರ

ಮುಂಬೈ: ಕೃಷಿಕರಿಗೆ ಸಾಲ ನೀಡುವ ಸಂದರ್ಭದಲ್ಲಿ ಜಮೀನು ಪರಿಶೀಲನೆ ನಡೆಸುವಾಗ, ಉಪಗ್ರಹಗಳಿಂದ ಸಿಗುವ ಚಿತ್ರಗಳನ್ನು ಐಸಿಐಸಿಐ ಬ್ಯಾಂಕ್ ಬಳಸಿಕೊಳ್ಳಲಿದೆ. ದೇಶಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಂಥದ್ದೊಂದು ಹೆಜ್ಜೆ ಇರಿಸಿರುವುದು ಇದೇ ಮೊದಲು ಎನ್ನಲಾಗಿದೆ.

ಈ ವ್ಯವಸ್ಥೆಯನ್ನು ಐಸಿಐಸಿಐ ಬ್ಯಾಂಕ್‌, ಕೆಲವು ಆಯ್ದ ಹಳ್ಳಿಗಳಲ್ಲಿ ಈಗಾಗಲೇ ಪರೀಕ್ಷಾರ್ಥವಾಗಿ ಜಾರಿಗೆ ತಂದಿತ್ತು. ಈಗ ಬ್ಯಾಂಕ್‌ ಇದನ್ನು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತಿನ ಒಟ್ಟು 500 ಹಳ್ಳಿಗಳಿಗೆ ವಿಸ್ತರಿಸುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಾಗೂ ಅಮೆರಿಕದ ‘ನಾಸಾ’ದಿಂದ ಲಭ್ಯವಿರುವ ಚಿತ್ರಗಳನ್ನುಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಮುಂದಿನ ಮೂರು ತಿಂಗಳುಗಳಲ್ಲಿ ಈ ವ್ಯವಸ್ಥೆಯನ್ನು ಒಟ್ಟು 63 ಸಾವಿರ ಹಳ್ಳಿಗಳಿಗೆ ವಿಸ್ತರಿಸುವ ಆಲೋಚನೆಯನ್ನು ಬ್ಯಾಂಕ್ ಹೊಂದಿದೆ.

‘ಮುಂದಿನ ಒಂದು ತಿಂಗಳಲ್ಲಿ ಇದನ್ನು 25 ಸಾವಿರ ಹಳ್ಳಿಗಳಿಗೆ ವಿಸ್ತರಿಸಲಿದ್ದೇವೆ, ನಂತರ 63 ಸಾವಿರ ಹಳ್ಳಿಗಳಿಗೆ ವಿಸ್ತರಿಸಲಾಗುವುದು’ ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಅನೂಪ್ ಬಗ್ಚಿ ತಿಳಿಸಿದರು. ಲಾಕ್‌ಡೌನ್‌ ಅವಧಿಯಲ್ಲಿ ಕೂಡ ಗ್ರಾಮಾಂತರ ಪ್ರದೇಶಗಳಿಗೆ ಸಂಬಂಧಿಸಿದಂತೆಬ್ಯಾಂಕಿನ ವಹಿವಾಟು ಚೆನ್ನಾಗಿಯೇ ನಡೆದಿದೆ ಎಂದರು. ಸಾಲ ಪಡೆಯುವ ವಿಚಾರದಲ್ಲಿ ರೈತರು ಹೊಂದಿರುವ ಸಾಮರ್ಥ್ಯ ಅಂದಾಜಿಸಲು ಉಪಗ್ರಹ ರವಾನಿಸುವ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತದೆ.

ಜಮೀನು, ನೀರಾವರಿ, ಬೆಳೆ ಪದ್ಧತಿಗೆ ಸಂಬಂಧಿಸಿದ ಹಲವು ಮಾನದಂಡಗಳ ಅಡಿ ಪರಿಶೀಲನೆ ನಡೆಸಲು ಉಪಗ್ರಹ ಆಧಾರಿತ ಚಿತ್ರಗಳನ್ನು ಬಳಸುತ್ತಿರುವ, ಆ ಮೂಲಕ ಸಾಲ ವಿತರಣೆ ಕುರಿತು ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳುವ ದೇಶದ ಮೊದಲ ಬ್ಯಾಂಕ್ ತಮ್ಮದು ಎಂದು ಅನೂಪ್ ಹೇಳಿದರು. ಈ ವ್ಯವಸ್ಥೆಯ ಅಡಿ, ಸಾಲ ನೀಡುವ ಮುನ್ನ ಬ್ಯಾಂಕ್ ಅಧಿಕಾರಿಗಳು ಜಮೀನಿನ ಪರಿಶೀಲನೆಗೆ ಖುದ್ದಾಗಿ ಭೇಟಿ ನೀಡುವ ಅಗತ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT