ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಎಸ್‌ಬಿಐ ಲಾಭ ಶೇ 62ರಷ್ಟು ಹೆಚ್ಚಳ

Last Updated 4 ಫೆಬ್ರುವರಿ 2023, 7:00 IST
ಅಕ್ಷರ ಗಾತ್ರ

ಮುಂಬೈ: ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್‌ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹ 15,477 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭವು ಶೇಕಡ 62ರಷ್ಟು ಹೆಚ್ಚಾಗಿದೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ತೆರಿಗೆ ನಂತರದ ಲಾಭವು ₹ 14,205 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 8,432 ಕೋಟಿ ಲಾಭ ಆಗಿತ್ತು.

ಬ್ಯಾಂಕ್‌ನ ಒಟ್ಟು ವರಮಾನ ₹ 78,351 ಕೋಟಿಯಿಂದ ₹ 98,084 ಕೋಟಿಗೆ ಏರಿಕೆ ಕಂಡಿದೆ. ಕಾರ್ಯಾಚರಣೆ ವೆಚ್ಚವು ₹ 20,839 ಕೋಟಿಯಿಂದ ₹ 24,317 ಕೋಟಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. ನಿವ್ವಳ ಬಡ್ಡಿ ವರಮಾನ ಶೇ 24.05ರಷ್ಟು ಹೆಚ್ಚಾಗಿ ₹38,069 ಕೋಟಿಗೆ ತಲುಪಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ಡಿಸೆಂಬರ್ ತ್ರೈಮಾಸಿಕದಲ್ಲಿ ₹ 1,586 ಕೋಟಿಗೆ ಇಳಿಕೆ ಆಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 3.52 ರಿಂದ ಶೇ 3.14ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT