ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಬಿಐಗೆ ₹21,384 ಕೋಟಿ ಲಾಭ

Published 10 ಮೇ 2024, 4:00 IST
Last Updated 10 ಮೇ 2024, 4:00 IST
ಅಕ್ಷರ ಗಾತ್ರ

ಮುಂಬೈ: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹21,384 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹18,093 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 18ರಷ್ಟು ಏರಿಕೆ ಆಗಿದೆ. ಒಟ್ಟು ವರಮಾನವು ₹1.06 ಲಕ್ಷ ಕೋಟಿಯಿಂದ ₹1.28 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಬಡ್ಡಿಯೇತರ ವರಮಾನದ ಏರಿಕೆಯಿಂದಾಗಿ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಬ್ಯಾಂಕ್‌, ಷೇರುಪೇಟೆಗೆ ಗುರುವಾರ ತಿಳಿಸಿದೆ.

ಬಡ್ಡಿಯೇತರ ವರಮಾನದಲ್ಲಿ ಶೇ 24ರಷ್ಟು ಹೆಚ್ಚಳವಾಗಿದ್ದು, ₹17,369 ಕೋಟಿ ಗಳಿಸಿದೆ.

2023–24ರ ಪೂರ್ಣ ಹಣಕಾಸು ವರ್ಷದ ಲಾಭದಲ್ಲಿ ಶೇ 20ರಷ್ಟು ಏರಿಕೆ ಆಗಿದ್ದು, ₹67,084 ಕೋಟಿ ಆಗಿದೆ. ವೆಚ್ಚವು ₹29,732 ಕೋಟಿಯಿಂದ ₹30,276 ಕೋಟಿಗೆ ಏರಿಕೆಯಾಗಿದೆ. 

‘ವಸೂಲಾಗದ ಸಾಲದ ಸರಾಸರಿ ಪ್ರಮಾಣದಲ್ಲಿ (ಎನ್‌ಪಿಎ) ಸುಧಾರಣೆ ಕಂಡಿದ್ದು‌, ಶೇ 2.78ರಿಂದ ಶೇ 2.24ಕ್ಕೆ ಇಳಿದಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 2.42ರಷ್ಟಿತ್ತು’ ಎಂದು ಬ್ಯಾಂಕ್‌ ಅಧ್ಯಕ್ಷ ದಿನೇಶ ಕುಮಾರ್‌ ಖಾರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT