ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಬಿಐ ನಿಶ್ಚಿತ ಠೇವಣಿ ಬಡ್ಡಿದರ ಏರಿಕೆ

Published 16 ಮೇ 2024, 14:28 IST
Last Updated 16 ಮೇ 2024, 14:28 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ  (ಎಸ್‌ಬಿಐ) ಆಯ್ದ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.75ರ ವರೆಗೂ ಹೆಚ್ಚಿಸಿದೆ. ಹಾಗಾಗಿ, ಉಳಿದ ಬ್ಯಾಂಕ್‌ಗಳು ಕೂಡ ಬಡ್ಡಿದರ ಹೆಚ್ಚಿಸುವ ಸಾಧ್ಯತೆಯಿದೆ.   

ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ ಬುಧವಾರದಿಂದಲೇ ಈ ಪರಿಷ್ಕೃತ ಬಡ್ಡಿದರವು ಜಾರಿಗೆ ಬಂದಿದೆ.    

₹2 ಕೋಟಿ ಮೊತ್ತದ ನಿಶ್ಚಿತ ಠೇವಣಿಯ ಅಲ್ಪಾವಧಿ ಮತ್ತು ದೀರ್ಘಾವಧಿ ವರೆಗಿನ ಬಡ್ಡಿದರವನ್ನೂ ಹೆಚ್ಚಿಸಲಾಗಿದೆ. 

7 ದಿನಗಳಿಂದ 210 ದಿನಗಳ ವರೆಗಿನ ನಿಶ್ಚಿತ ಠೇವಣಿಗಳ ಬಡ್ಡಿದರವನ್ನು ಶೇ 0.10ರಿಂದ ಶೇ 0.25ರಷ್ಟು ಹೆಚ್ಚಿಸಲಾಗಿದೆ. ಒಂದು ವರ್ಷದಿಂದ ಮೂರು ವರ್ಷದವರೆಗಿನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.20ರಿಂದ ಶೇ 0.25ರಷ್ಟು ಏರಿಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT