4 ಲಕ್ಷ ಎಂಎಸ್ಎಂಇಗೆ ಸಾಲ: ಎಸ್ಬಿಐ

ನವದೆಹಲಿ: ತುರ್ತು ಸಾಲ ಖಾತರಿ ಯೋಜನೆಯಡಿ 4 ಲಕ್ಷ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ (ಎಂಎಸ್ಎಂಇ) ಸಾಲ ಸೌಲಭ್ಯ ನೀಡಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ತಿಳಿಸಿದೆ.
ಯೋಜನೆಯಡಿ ಅರ್ಹ ಎಂಎಸ್ಎಂಇ ಗ್ರಾಹಕರಿಗೆ ₹ 20 ಸಾವಿರ ಕೋಟಿ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಎಂಎಸ್ಎಂಇಗಳಿಗೆ ತುರ್ತು ಸಾಲ ಸೌಲಭ್ಯವಲ್ಲದೆ, ದುಡಿಯುವ ಬಂಡವಾಳದ ಮಿತಿಯ ಮರು ಪರಿಶೀಲನೆ ಹಾಗೂ ಮುಂಗಡದಲ್ಲಿ ಮರುಹೊಂದಾಣಿಕೆ ಸೌಲಭ್ಯಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದೆ.
ಕೋವಿಡ್ನಿಂದ ತೀವ್ರವಾಗಿ ಬಾಧಿತಗೊಂಡಿರುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ಸರ್ಕಾರ ಪ್ರಕಟಿಸಿರುವ ₹ 3 ಲಕ್ಷ ಕೋಟಿ ಮೊತ್ತದ ಸಾಲ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪನಿ (ಎನ್ಸಿಜಿಟಿಸಿ) ಕಾರ್ಯಪ್ರವೃತ್ತವಾಗಿದೆ. ಬ್ಯಾಂಕ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ) ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ‘ಎನ್ಸಿಜಿಟಿಸಿ’ ಶೇ 100ರಷ್ಟು ಸಾಲ ಮರುಪಾವತಿಯ ಖಾತರಿ ನೀಡಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.