ಮುಂಬೈ: ಇಸ್ರೇಲ್–ಇರಾನ್ ನಡುವೆ ತಲೆದೋರಿದ್ದ ಉದ್ವಿಗ್ನತೆಯು ತುಸು ಕಡಿಮೆಯಾಗಿರುವುದರಿಂದ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಏಷ್ಯಾ ಹಾಗೂ ಯುರೋಪ್ ಮಾರುಕಟ್ಟೆಗಳು ಏರಿಕೆ ದಾಖಲಿಸಿವೆ. ಬ್ರೆಂಟ್ ಕಚ್ಚಾ ತೈಲ ದರವು ಇಳಿಕೆಯಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಖರೀದಿಯೂ ಹೆಚ್ಚಿದೆ. ಇದರಿಂದ ಸೂಚ್ಯಂಕಗಳು ಶೇ 1ರಷ್ಟು ಏರಿಕೆ ಕಂಡಿವೆ.

ಎರಡು ದಿನಗಳಲ್ಲಿ ಗೂಳಿಯ ಓಟದಿಂದಾಗಿ ಹೂಡಿಕೆದಾರರ ಸಂಪತ್ತು ₹4.97 ಲಕ್ಷ ಕೋಟಿ ಏರಿಕೆಯಾಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 560 ಅಂಶ (ಶೇ 0.77ರಷ್ಟು) ಏರಿಕೆ ಕಂಡು, 73,648 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ದಿನದ ವಹಿವಾಟಿನಲ್ಲಿ 679 ಅಂಶ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 189 ಅಂಶ ಏರಿಕೆ ಕಂಡು, 22,336 ಅಂಶಗಳಲ್ಲಿ ವಹಿವಾಟು ಸ್ಥಿರಗೊಂಡಿತು.

ಸೆನ್ಸೆಕ್ಸ್ ಗುಚ್ಛದಲ್ಲಿನ ಎಲ್ ಆ್ಯಂಡ್ ಟಿ, ಬಜಾಜ್ ಫಿನ್‌ಸರ್ವ್, ಎಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲ್ಟ್ರಾಟೆಕ್ ಸಿಮೆಂಟ್, ವಿಪ್ರೊ, ಐಸಿಐಸಿಐ ಬ್ಯಾಂಕ್, ಇನ್ಫೊಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಏಷಿಯನ್ ಪೇಂಟ್ಸ್ ಷೇರುಗಳು ಏರಿಕೆ ಕಂಡಿವೆ.

ಎನ್‌ಟಿಪಿಸಿ, ಜೆಎಸ್‌ಡಬ್ಲ್ಯು ಸ್ಟೀಲ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರಿನ ಮೌಲ್ಯ ಇಳಿಕೆಯಾಗಿದೆ.

ಸೋಲ್, ಟೋಕಿಯೊ ಹಾಗೂ ಹಾಂಗ್‌ಕಾಂಗ್ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಶಾಂಘೈ ಮಾರುಕಟ್ಟೆಯು ಇಳಿಕೆ ದಾಖಲಿಸಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.80ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 86.59 ಡಾಲರ್ ಆಗಿದೆ.

‘ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕೊಂಚ ವಿರಾಮ ಪಡೆದಿದ್ದರೂ ಪರಿಸ್ಥಿತಿಯ ಅಸ್ಥಿರವಾಗಿದೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಚೇತರಿಕೆ ಕಂಡಿವೆ. ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಬೆಲೆಯು ಎತ್ತರದ ಮಟ್ಟದಲ್ಲಿಯೇ ಇದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯಸ್ಥ (ಸಂಶೋಧನೆ) ವಿನೋದ್ ನಾಯರ್ ತಿಳಿಸಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರದಂದು ₹129 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ₹14 ಸಾವಿರ ಕೋಟಿ ನಷ್ಟ

ಮುಂಬೈ (ಪಿಟಿಐ): ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರಿನ ಮೌಲ್ಯ ಶೇ 1ರಷ್ಟು ಕುಸಿದಿದ್ದರಿಂದ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹14434 ಕೋಟಿ ಕರಗಿದೆ. 2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ. ಇದರ ಹೊರತಾಗಿಯೂ ಷೇರುಗಳು ಇಳಿಕೆ ಕಂಡಿವೆ. ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 1.24ರಷ್ಟು ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹1512.30 ಆಗಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 1.10ರಷ್ಟು ಇಳಿಕೆ ಕಂಡಿದ್ದು ಪ್ರತಿ ಷೇರಿನ ಬೆಲೆ ₹1514.35 ಆಗಿದೆ. ಬ್ಯಾಂಕ್‌ನ ಒಟ್ಟು ಎಂ–ಕ್ಯಾಪ್ ₹11.48 ಲಕ್ಷ ಆಗಿದೆ.

ಜಿಯೊ ಫೈನಾನ್ಶಿಯಲ್ ಷೇರು ಏರಿಕೆ

ನವದೆಹಲಿ (ಪಿಟಿಐ): ಕೊನೆಯ ತ್ರೈಮಾಸಿಕದಲ್ಲಿ ಜಿಯೊ ಫೈನಾನ್ಶಿಯಲ್‌ನ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ. ಇದರಿಂದ ಕಂಪನಿಯ ಷೇರಿನ ಮೌಲ್ಯವು ಶೇ 3ರಷ್ಟಕ್ಕೂ ಹೆಚ್ಚು ಏರಿಕೆಯಾಗಿದ್ದು 52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 4ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆ ₹385ಕ್ಕೆ ಮುಟ್ಟಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 3.98ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆ 384.85ಕ್ಕೆ ತಲುಪಿದೆ. ಒಂದೇ ದಿನ ಎಂ–ಕ್ಯಾಪ್‌ಗೆ ₹8100 ಕೋಟಿ ಸೇರ್ಪಡೆಯಾಗಿದೆ. ಒಟ್ಟು ಎಂ–ಕ್ಯಾಪ್ ₹2.43 ಲಕ್ಷ ಕೋಟಿಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.