ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಕ್ರಮಕ್ಕೆ ಷೇರುಪೇಟೆ ಮಿಶ್ರ ಪ್ರತಿಕ್ರಿಯೆ

Last Updated 27 ಮಾರ್ಚ್ 2020, 10:52 IST
ಅಕ್ಷರ ಗಾತ್ರ

ಬ್ಯಾಂಕಿಂಗ್‌ ವಲಯದ ಪುನಶ್ಚೇತನಕ್ಕೆ ಮತ್ತು ಚಿಲ್ಲರೆ ಗ್ರಾಹಕರ ಅನುಕೂಲಕ್ಕೆ ರಿಸರ್ವ್‌ ಬ್ಯಾಂಕ್ ಕ್ರಮಗಳನ್ನು ಘೋಷಿಸಿದ್ದು ಸಹ ಷೇರುಪೇಟೆಯಲ್ಲಿ ಹೆಚ್ಚು ಉತ್ಸಾಹ ಮೂಡಿಸಲಿಲ್ಲ. ಸೆನ್ಸೆಕ್ಸ್ 131.18 ಅಂಶಗಳನ್ನು ಕಳೆದುಕೊಂಡು 29815.59ರಲ್ಲಿ ದಿನದ ವಹಿವಾಟು ಮುಗಿಸಿತು. ನಿಫ್ಟಿ 18.80 ಅಂಶಗಳಷ್ಟು ಅಲ್ಪ ಚೇತರಿಕೆ ಕಂಡು 8660.25ರಲ್ಲಿ ದಿನದ ವಹಿವಾಟು ಮುಗಿಸಿತು.

ಒಟ್ಟು 1131 ಷೇರುಗಳ ಮೌಲ್ಯ ಏರಿಕೆಯಾದರೆ, 1138 ಷೇರುಗಳು ಕುಸಿದವು. 166 ಷೇರುಗಳ ಮೌಲ್ಯ ಬದಲಾಗಲಿಲ್ಲ. ನಿಫ್ಟಿಯಲ್ಲಿ ಕೋಲ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಐಟಿಸಿ, ಎನ್‌ಟಿಪಿಸಿ ಮತ್ತು ಸಿಪ್ಲಾ ಹೆಚ್ಚು ಗಳಿಕೆ ದಾಖಲಿಸಿದ ಕಂಪನಿಗಳು. ಹೀರೊ ಮೋಟೊಕಾರ್ಪ್, ಬಜಾಜ್‌ ಫೈನಾನ್ಸ್‌, ಇಂಡಸ್‌ಇಂಡ್ ಬ್ಯಾಂಕ್, ಗೇಲ್ ಇಂಡಿಯಾ ಮತ್ತು ಮಾರುತಿ ಸುಜುಕಿಯ ಷೇರುಗಳು ಕುಸಿದವು.

ಆಟೊಮೊಬೈಲ್, ಎನರ್ಜಿ ಮತ್ತು ಇನ್ಫ್ರಾ ವಲಯದಲ್ಲಿ ಹೆಚ್ಚು ಚಟುವಟಿಕೆ ಕಂಡುಬಂತು. ಬಿಎಸ್‌ಸಿ ಮಿಡ್‌ಕ್ಯಾಪ್ (ಮಧ್ಯಮ ಗಾತ್ರದ ಕಂಪನಿಗಳ ಲಿಸ್ಟಿಂಗ್) ಕೆಳಗಿಳಿದರೆ, ಸ್ಮಾಲ್‌ಕ್ಯಾಪ್ ತುಸು ಮುನ್ನಡೆ ದಾಖಲಿಸಿತು.

ವಹಿವಾಟು ಆರಂಭವಾದ ಕೆಲವೇ ಗಂಟೆಗಳಲ್ಲಿ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,179 ಅಂಶಗಳ ಏರಿಕೆ ದಾಖಲಿಸಿ, ಒಟ್ಟಾರೆ 31,000 ಅಂಶಗಳ ಗಡಿ ದಾಟಿತ್ತು. ನಿಫ್ಟಿ 50 ಸಹ ಮುನ್ನಡೆ ದಾಖಲಿಸಿ 9,000 ಗಡಿ ದಾಟಿತು. ಆದರೆ ಸೂರ್ಯ ಮೇಲೇರಿ, ಪಶ್ಚಿಮದತ್ತ ವಾಲಿದಂತೆ ದಿನದ ಗಳಿಕೆಯೂ ಬಾಡಲು ಆರಂಭಿಸಿತು. ದಿನದ ಆರಂಭದ ಗಳಿಕೆಯೂ ಮಂಜಿನಂತೆ ಕರಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT