ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಸೂಚ್ಯಂಕ; 396 ಅಂಶ ಚೇತರಿಕೆ

Last Updated 26 ಸೆಪ್ಟೆಂಬರ್ 2019, 10:38 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ 396 ಅಂಶಗಳ ಚೇತರಿಕೆ ಕಂಡಿದೆ.

ಸೆಪ್ಟೆಂಬರ್‌ ತಿಂಗಳ ವಾಯಿದಾ ವಹಿವಾಟು ಅಂತ್ಯ ಮತ್ತು ಜಾಗತಿಕ ಷೇರುಪೇಟೆಗಳಲ್ಲಿ ಕಂಡು ಬಂದ ಖರೀದಿ ಉತ್ಸಾಹದ ಕಾರಣದಿಂದ ಸೂಚ್ಯಂಕ ಏರಿಕೆ ದಾಖಲಿಸಿದೆ.

ಸಂವೇದಿ ಸೂಚ್ಯಂಕದಲ್ಲಿನ ಪ್ರಮುಖ ಷೇರುಗಳಾದ ಐಸಿಐಸಿಐ ಬ್ಯಾಂಕ್‌, ಆರ್‌ಐಎಲ್‌, ಎಲ್‌ಆ್ಯಂಡ್‌ಟಿ ಮತ್ತು ಮಾರುತಿ ಷೇರುಗಳಲ್ಲಿನ ಗಳಿಕೆಯು ಸೂಚ್ಯಂಕ ಏರಿಕೆಗೆ ಕಾರಣವಾಗಿದೆ.

‘ಚೀನಾ ಜತೆಗಿನ ವಾಣಿಜ್ಯ ಒಪ್ಪಂದವು ನಿರೀಕ್ಷೆಗಿಂತ ಬೇಗ ಜಾರಿಗೆ ಬರಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿರುವುದು ಜಾಗತಿಕ ಷೇರುಪೇಟೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಗಳಿಂದ ಪ್ರಭಾವಿತರಾಗುವ ದೇಶಿ ಹೂಡಿಕೆದಾರರು ಕೂಡ ಖರೀದಿಗೆ ಆಸಕ್ತಿ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT