ಮುಂಬೈ/ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದವು. ಆದರೆ, ದಿನದ ವಹಿವಾಟಿನ ಅಂತ್ಯದಲ್ಲಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಸೂಚ್ಯಂಕಗಳು ಇಳಿಕೆ ಕಂಡವು.

ಲಾಭದ ಗಳಿಕೆಯ ಉದ್ದೇಶಕ್ಕಾಗಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾದರು. ಇದು ಸಹ ಷೇರು ಸೂಚ್ಯಂಕ ಇಳಿಕೆಗೆ ಕಾರಣವಾಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್ 20 ಅಂಶ ಇಳಿಕೆಯಾಗಿ, 75,390ಕ್ಕೆ ಅಂತ್ಯಗೊಂಡಿತು. ವಹಿವಾಟಿನ ವೇಳೆ 599 ಅಂಶ ಹೆಚ್ಚಳವಾಗಿ ಸಾರ್ವಕಾಲಿಕ ಗರಿಷ್ಠ 76,009ಕ್ಕೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 24 ಅಂಶ ಕಡಿಮೆಯಾಗಿ 22,932ಕ್ಕೆ ಅಂತ್ಯಗೊಂಡಿತು. ದಿನದ ವಹಿವಾಟಿನಲ್ಲಿ 153 ಅಂಶ ಹೆಚ್ಚಳವಾಗಿ 23,110ಕ್ಕೆ ಏರಿಕೆಯಾಗಿತ್ತು.

ಸೆನ್ಸೆಕ್ಸ್ ಇದೇ ಮಾರ್ಚ್ 6ರಂದು 74 ಸಾವಿರ, ಏಪ್ರಿಲ್ 9ರಂದು 75 ಸಾವಿರ ಮತ್ತು ಮೇ 27ರಂದು 76 ಸಾವಿರ ಅಂಶಕ್ಕೆ ಏರಿಕೆಯಾಗಿತ್ತು.

ವಿಪ್ರೊ, ಎನ್‌ಟಿಪಿಸಿ, ಸನ್‌ಫಾರ್ಮಾ, ಮಹೀಂದ್ರ ಆ್ಯಂಡ್ ಮಹೀಂದ್ರ, ಐಟಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಮೌಲ್ಯ ಇಳಿಕೆ ಕಂಡಿವೆ. ಇಂಡಸ್‌ಇಂಡ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಲಾರ್ಸೆನ್ ಆ್ಯಂಡ್ ಟೊಬ್ರೊ, ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗಳಿಕೆ ಕಂಡಿವೆ.

ಏಷ್ಯಾದ ಮಾರುಕಟ್ಟೆಯಲ್ಲಿ ಸೋಲ್, ಟೊಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್ ಸಕಾರಾತ್ಮಕವಾಗಿ ಅಂತ್ಯಗೊಂಡವು. ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಶೇ 0.38ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 82.44 ಡಾಲರ್‌ಗೆ (ಅಂದಾಜು ₹6,853) ಮುಟ್ಟಿದೆ.

ಲೋಕಸಭಾ ಚುನಾವಣೆ ಫಲಿತಾಂಶ ಜೂನ್ 4ರಂದು ಹೊರ ಬೀಳಲಿದೆ. ಇದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ವಹಿವಾಟಿನಲ್ಲಿ ದಾಖಲೆಯ ಏರಿಕೆ ಕಂಡಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ, ನಂತರದ ವಹಿವಾಟಿನಲ್ಲಿ ಇಳಿಕೆ ಕಂಡವು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಗಳಿಕೆ ಕಂಡ ಕಂಪನಿಗಳು (ಶೇಕಡಾವಾರು)

ಇಂಡಸ್‌ಇಂಡ್ ಬ್ಯಾಂಕ್; 1.65

ಎಕ್ಸಿಸ್ ಬ್ಯಾಂಕ್; 1.00

ಬಜಾಜ್ ಫೈನಾನ್ಸ್; 0.87

ಎಚ್‌ಡಿಎಫ್‌ಸಿ ಬ್ಯಾಂಕ್; 0.75

ಎಲ್ ಆ್ಯಂಡ್ ಟಿ; 0.69

ಇಳಿಕೆ ಕಂಡ ಕಂಪನಿಗಳು (ಶೇಕಡಾವಾರು)

ವಿಪ್ರೊ; 2.36

ಎನ್‌ಟಿಪಿಸಿ; 1.40

ಸನ್‌ಫಾರ್ಮಾ; 1.34

ಮಹೀಂದ್ರ ಆ್ಯಂಡ್ ಮಹೀಂದ್ರ; 1.23

ಐಟಿಸಿ; 1.05

ಅಶೋಕ್ ಲೇಲ್ಯಾಂಡ್: ಎಂ–ಕ್ಯಾಪ್ ₹4756 ಕೋಟಿ ಸೇರ್ಪಡೆ

ಮಾರ್ಚ್ ತ್ರೈಮಾಸಿಕದಲ್ಲಿನ ಲಾಭದ ಏರಿಕೆಯಿಂದ ಅಶೋಕ್ ಲೇಲ್ಯಾಂಡ್‌ನ ಷೇರಿನ ಮೌಲ್ಯ ಸೋಮವಾರ ಶೇ 8ರಷ್ಟು ಏರಿಕೆಯಾಗಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯ ಕ್ರಮವಾಗಿ ಶೇ 7.69 ಮತ್ತು ಶೇ 7.78ರಷ್ಟಾಗಿದೆ. ಷೇರಿನ ಬೆಲೆಯು ₹226 ಮತ್ತು ₹227ಕ್ಕೆ ಮುಟ್ಟಿದೆ. ಷೇರಿನ ಮೌಲ್ಯ ಏರಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್) ಒಂದೇ ದಿನ ₹4756 ಕೋಟಿ ಸೇರ್ಪಡೆಯಾಗಿದೆ.

ಕಂಪನಿಯ ಒಟ್ಟು ಎಂ–ಕ್ಯಾಪ್ ₹66581 ಕೋಟಿಗೆ ಮುಟ್ಟಿದೆ. 2023–24ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿ ₹933 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿ ₹799 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 16ರಷ್ಟು ಹೆಚ್ಚಾಗಿದೆ. ಇದರಿಂದ ಷೇರಿನ ಮೌಲ್ಯ ಏರಿಕೆಯಾಗಿದೆ.

ಅದಾನಿ ಪೋರ್ಟ್ಸ್ ಷೇರು ಮೌಲ್ಯ ಏರಿಕೆ

ಅದಾನಿ ಸಮೂಹದ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಜೋನ್ (ಎಪಿಎಸ್‌ಇಝೆಡ್) ಷೇರಿನ ಮೌಲ್ಯ ಶೇ 1ಕ್ಕಿಂತ ಹೆಚ್ಚು ಏರಿಕೆ ಆಗಿದೆ. ಈ ಮೂಲಕ 52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ದಿನದ ವಹಿವಾಟಿನ ವೇಳೆ ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 2.93ರಷ್ಟು ಹೆಚ್ಚಳವಾಗಿ ಷೇರಿನ ಬೆಲೆ ₹1457ಕ್ಕೆ ಮುಟ್ಟಿತ್ತು. ಆದರೆ ವಹಿವಾಟಿನ ಅಂತ್ಯದ ವೇಳೆಗೆ ಶೇ 1.13ರಷ್ಟಕ್ಕೆ ಕಡಿಮೆಯಾಗಿ ಷೇರಿನ ಬೆಲೆ ₹1431ಕ್ಕೆ ಇಳಿಯಿತು.

ಅದಾನಿ ಪೋರ್ಟ್ಸ್ ಕಂಪನಿಯು ಮಾರುಕಟ್ಟೆ ಮೌಲ್ಯದಲ್ಲಿ ವಿಪ್ರೊ ಕಂಪನಿಯನ್ನು ಹಿಂದಿಕ್ಕಿದೆ. ಜೂನ್ 24ರಿಂದ 30 ಕಂಪನಿಗಳ ಗುಚ್ಛವಾದ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಇದರಿಂದ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. ವಿಪ್ರೊ ಷೇರಿನ ಮೌಲ್ಯ ಇಳಿಕೆ: ವಿಪ್ರೊ ಷೇರಿನ ಮೌಲ್ಯ ಸೋಮವಾರ ಶೇ 2.36ರಷ್ಟು ಕಡಿಮೆಯಾಗಿ ಪ್ರತಿ ಷೇರಿನ ಬೆಲೆ ₹452ಕ್ಕೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.