ಶನಿವಾರ, ಮಾರ್ಚ್ 28, 2020
19 °C

ಸೇವಾ ವಲಯದ ಚಟುವಟಿಕೆ ಏಳು ವರ್ಷಗಳ ಗರಿಷ್ಠ ಮಟ್ಟಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಯು ಫೆಬ್ರುವರಿಯಲ್ಲಿ ಏಳು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಸತತ ಐದನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಚಟುವಟಿಕೆ ನಡೆಯುತ್ತಿದೆ. ಹೊಸ ವಹಿವಾಟು, ರಫ್ತು ಬೇಡಿಕೆಯಲ್ಲಿ ಸುಧಾರಣೆ ಹಾಗೂ ವಹಿವಾಟು ನಡೆಸುವ ಬಗೆಗಿನ ವಿಶ್ವಾಸದಲ್ಲಿನ ಹೆಚ್ಚಳದಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ತಿಳಿಸಿದೆ.

ಇಂಡಿಯಾ ಸರ್ವೀಸಸ್‌ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಜನವರಿಯಲ್ಲಿ 55.5 ಇತ್ತು. ಫೆಬ್ರುವರಿಯಲ್ಲಿ 57.5ಕ್ಕೆ ಏರಿಕೆಯಾಗಿದೆ. 2013ರ ಜನವರಿ ಬಳಿಕ ಅತ್ಯಂತ ಗರಿಷ್ಠ ಮಟ್ಟದ ಏರಿಕೆ ಇದಾಗಿದೆ. ತಯಾರಿಕೆ ಮತ್ತು ಸೇವಾ ವಲಯಗಳ ಬೆಳವಣಿಗೆಯು 56.3 ರಿಂದ 57.6ಕ್ಕೆ ಏರಿಕೆಯಾಗಿದೆ.

‘ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸೇವಾ ವಲಯಕ್ಕೆ ಬೇಡಿಕೆ ಇರುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ ಮುಖ್ಯ ಆರ್ಥಿಕ ತಜ್ಞೆ ಪಾಲಿಯಾನ ಡಿ ಲಿಮಾ ಹೇಳಿದ್ದಾರೆ.

‘ನ್ಯೂಯಾರ್ಕ್‌ನಲ್ಲಿ ತಯಾರಿಕೆ ಮತ್ತು ಸೇವಾ ವಲಯವು ಸಕಾರಾತ್ಮಕ ಮಟ್ಟದಲ್ಲಿದೆ. ಇದು ಮಾರ್ಚ್‌ನಲ್ಲಿ ಖಾಸಗಿ ವಲಯದ ತಯಾರಿಕೆಯನ್ನು ಹೆಚ್ಚಿಸಲಿದ್ದು, ಜಿಡಿಪಿ ಬೆಳವಣಿಗೆಗೆ ಕೊಡುಗೆ ನೀಡುವ ಸಾಧ್ಯತೆ ಇದೆ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು