ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಯು ಆಗಸ್ಟ್ ತಿಂಗಳಲ್ಲಿ ತುಸು ಚೇತರಿಕೆ ಕಂಡಿದೆಯಾದರೂ, ನಕಾರಾತ್ಮಕ ಬೆಳವಣಿಗೆಯಿಂದ ಇನ್ನೂ ಹೊರಬಂದಿಲ್ಲ.

ಸೇವಾ ವಲಯದ ಚಟುವಟಿಕೆ ಮಟ್ಟವನ್ನು ಸೂಚಿಸುವ, ಸರ್ವಿಸ್ ಬಿಸಿನೆಸ್ ಆ್ಯಕ್ಟಿವಿಟಿ ಇಂಡೆಕ್ಸ್ ಜುಲೈನಲ್ಲಿ 34.2ರಷ್ಟು ಇದ್ದಿದ್ದು ಆಗಸ್ಟ್ನಲ್ಲಿ 41.8ಕ್ಕೆ ಏರಿಕೆಯಾಗಿದೆ ಎಂದು ಐಎಚ್ಎಸ್ ಮರ್ಕಿಟ್ ಇಂಡಿಯಾ ಸಂಸ್ಥೆ ತಿಳಿಸಿದೆ.

ಸೇವಾ ವಲಯದ ಚಟುವಟಿಕೆಗಳು ಸಕಾರಾತ್ಮಕ ಮಟ್ಟದಲ್ಲಿ ಇದೆ ಎಂದು ಪರಿಗಣಿಸಲು ಸೂಚ್ಯಂಕವು 50 ಅಥವಾ ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇರಬೇಕು. ಆಗಸ್ಟ್ ತಿಂಗಳಲ್ಲಿ ಸೂಚ್ಯಂಕವು 50ಕ್ಕಿಂತ ಕಡಿಮೆ ಇರುವ ಕಾರಣ, ವಲಯದ ಬೆಳವಣಿಗೆಯು ಇಳಿಮುಖವಾಗಿಯೇ ಇದೆ.

ಲಾಕ್ಡೌನ್ನಿಂದ ವಾಣಿಜ್ಯ ವಹಿವಾಟಿನ ಮೇಲೆ ಆಗಿರುವ ಪರಿಣಾಮ ಮತ್ತು ಬೇಡಿಕೆ ಕುಸಿತದಿಂದಾಗಿ ಸತತ ಆರನೇ ತಿಂಗಳಿನಲ್ಲಿಯೂ ನಕಾರಾತ್ಮಕವಾಗಿಯೇ ಇದೆ. ಇದರಿಂದಾಗಿ ಈ ವಲಯದಲ್ಲಿ ಉದ್ಯೋಗ ನಷ್ಟವಾಗಿದೆ.

ವರಮಾನ ನಷ್ಟ ಮತ್ತು ಹೆಚ್ಚುತ್ತಿರುವ ವೆಚ್ಚದಿಂದಾಗಿ ಕಂಪನಿಗಳು ಬೆಲೆ ಏರಿಕೆ ನಿರ್ಧಾರಕ್ಕೆ ಬಂದಿವೆ. ‘ಹಿಂದಿನ ಮೂರು ತಿಂಗಳಿಗೆ ಹೋಲಿಸಿದರೆ ವಲಯದ ಬೆಳವಣಿಗೆಯು ನಕಾರಾತ್ಮಕ ಮಟ್ಟದಿಂದ ಸ್ಥಿರತೆಯೆಡೆಗೆ ಮರಳುತ್ತಿದೆ. ಉದ್ಯೋಗ ನಷ್ಟದ ಪ್ರಮಾಣವೂ ಕಡಿಮೆಯಾಗುತ್ತಿದೆ’ ಎಂದು ಐಎಚ್ಎಸ್ ಮರ್ಕಿಟ್ನ ಆರ್ಥಿಕ ತಜ್ಞೆ ಶ್ರೇಯಾ ಪಟೇಲ್ ಹೇಳಿದ್ದಾರೆ.

ತಯಾರಿಕೆ ಮತ್ತು ಸೇವಾ ವಲಯದ ಬೆಳವಣಿಗೆ ಸೂಚಿಸುವ ಕಾಂಪೋಸಿಟ್ ಪಿಎಂಐ ಔಟ್ಪುಟ್ ಇಂಡೆಕ್ಸ್ 37.2ರಿಂದ 46ಕ್ಕೆ ಏರಿಕೆಯಾಗಿದೆ. ಸೂಚ್ಯಂಕದ 50ರ ಮಟ್ಟವನ್ನು ಪರಿಗಣಿಸಿದರೆ ಸತತ 5ನೇ ತಿಂಗಳಿನಲ್ಲಿಯೂ ಇಳಿಮುಖವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.