ಶನಿವಾರ, ಸೆಪ್ಟೆಂಬರ್ 19, 2020
23 °C
ಜಿಎಸ್‌ಟಿ: ಸೇವೆ ಒದಗಿಸುವವರಿಗೆ ಆಯ್ಕೆ ಅವಕಾಶ

ರಾಜಿ ತೆರಿಗೆ: 31ರವರೆಗೆ ಗಡುವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಾರ್ಷಿಕ ₹ 50 ಲಕ್ಷ‌ದವರೆಗೆ ವಹಿವಾಟು ನಡೆಸುವ ಸೇವೆ ಒದಗಿಸುವವರು ರಾಜಿ ತೆರಿಗೆ (ಕಂಪೋಸಿಷನ್‌ ಟ್ಯಾಕ್ಸ್‌) ಆಯ್ಕೆ ಮಾಡಿಕೊಳ್ಳಲು ಈ ತಿಂಗಳ 31ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ರಾಜಿ ತೆರಿಗೆ ಆಯ್ಕೆ ಮಾಡಿಕೊಂಡು ಸೇವೆ ಒದಗಿಸುವವರು 2019ರ ಏಪ್ರಿಲ್‌ನಿಂದ ಶೇ 6ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಜಿಎಸ್‌ಟಿಯಡಿ ಬಹುತೇಕ ಸೇವೆಗಳಿಗೆ ಶೇ 12 ರಿಂದ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ರಾಜಿ ತೆರಿಗೆ ಆಯ್ಕೆ ಮಾಡಿಕೊಳ್ಳಲು ಬಯಸುವ ಸೇವೆ ಒದಗಿಸುವವರು ಜಿಎಸ್‌ಟಿ ಫಾರ್ಮ್‌ ಸಿಎಂಪಿ–02 ಸಲ್ಲಿಸಬೇಕಾಗುತ್ತದೆ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮೊದಲು ಈ ಆಯ್ಕೆ ಮಾಡಿಕೊಳ್ಳಲು ಏಪ್ರಿಲ್‌ 30 ಕೊನೆಯ ದಿನವಾಗಿತ್ತು.

ಆರಂಭದಲ್ಲಿ ವಾರ್ಷಿಕ ₹ 1 ಕೋಟಿ ವಹಿವಾಟು ನಡೆಸುವ ವರ್ತಕರು ಮತ್ತು ತಯಾರಕರು ರಾಜಿ ತೆರಿಗೆ ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಈ ವರ್ಷದ ಏಪ್ರಿಲ್‌ನಿಂದ  ವಹಿವಾಟಿನ ಗರಿಷ್ಠ ಮಿತಿಯನ್ನು ₹ 1.5 ಕೋಟಿಗೆ ಹೆಚ್ಚಿಸಲಾಗಿತ್ತು.

ಶೇ 5, ಶೇ 12 ಅಥವಾ ಶೇ 18 ತೆರಿಗೆ ಪಾವತಿಸುವ ವರ್ತಕರು ಮತ್ತು ತಯಾರಕರು ಈ ಯೋಜನೆ ಆಯ್ಕೆ ಮಾಡಿಕೊಂಡರೆ  ಸರಕುಗಳಿಗೆ ಶೇ 1ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. 

* 1.22 ಕೋಟಿ – ಜಿಎಸ್‌ಟಿ ನೋಂದಾಯಿತ ವಹಿವಾಟುದಾರರು

* 17.5 ಲಕ್ಷ – ರಾಜಿ ತೆರಿಗೆ ಆಯ್ಕೆ ಮಾಡಿಕೊಂಡವರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು