ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಾಮ್‌ ಪ್ರಾಪರ್ಟೀಸ್‌ಗೆ ರಜತ ಸಂಭ್ರಮ

Published : 22 ಆಗಸ್ಟ್ 2024, 17:39 IST
Last Updated : 22 ಆಗಸ್ಟ್ 2024, 17:39 IST
ಫಾಲೋ ಮಾಡಿ
Comments

ಬೆಂಗಳೂರು: ಭಾರತದ ಮುಂಚೂಣಿಯ ರಿಯಲ್ ಎಸ್ಟೇಟ್ ಅಭಿವೃದ್ಧಿದಾರ ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀರಾಮ್‌ ಪಾಪರ್ಟೀಸ್‌ ಲಿಮಿಟೆಡ್‌ನ (ಎಸ್‌ಪಿಎಲ್) ಕಾರ್ಯಾಚರಣೆಯು 25ನೇ ವರ್ಷಕ್ಕೆ ಪ್ರವೇಶಿಸುತ್ತಿದ್ದು, ನೂತನ ಬ್ರ್ಯಾಂಡ್ ಗುರುತಿನ ಜೊತೆಗೆ ಹೊಸ ಅಭಿಯಾನಕ್ಕೆ ಕಂಪನಿ ಮುಂದಾಗಿದೆ.

‘ಹೊಸ ಪೀಳಿಗೆಯ ಖರೀದಿದಾರರ ನಡುವೆ ನಂಬಿಕಾರ್ಹ ಶ್ರೀರಾಮ್ ಬ್ರ್ಯಾಂಡ್ ಅನ್ನು ಮತ್ತಷ್ಟು ಎತ್ತರಕ್ಕೇರಿಸಲು ನಿರ್ಧರಿಸಲಾಗಿದೆ’ ಎಂದು ಶ್ರೀರಾಮ್‌ ಪಾಪರ್ಟೀಸ್‌ ಲಿಮಿಟೆಡ್‌ನ (ಎಸ್‌ಪಿಎಲ್) ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುರಳಿ ಮಲಯಪ್ಪನ್ ತಿಳಿಸಿದ್ದಾರೆ.

ಗ್ರಾಹಕರಿಗೆ ನಮ್ಮ ಬದ್ಧತೆ, ಗುಣಮಟ್ಟ ಮತ್ತು ವಿನ್ಯಾಸ, ಕೈಗಾರಿಕೆಯ ಮುಂಚೂಣಿ ನಿರ್ಮಾಣ ಮಟ್ಟ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಕಂಪನಿಯ ಗುರಿಯಾಗಿದೆ. ಗ್ರಾಹಕರ ಸಂತಸವನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯ ತಂತ್ರಜ್ಞಾನವನ್ನು ಬಳಸಲಾಗುವುದು. ದಕ್ಷಿಣ ಭಾರತ ಮಾತ್ರವಲ್ಲದೆ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರಮುಖ ಶಕ್ತಿಯಾಗಿ ಎಸ್‌ಪಿಎಲ್ ಅನ್ನು ಬೆಳೆಸಲು ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.

ಎಸ್‌ಪಿಎಲ್ ನೆಕ್ಸ್ಟ್: 

ಕಂಪನಿಯು ಈಗ ಎಸ್‌ಪಿಎಲ್‌ ನೆಕ್ಟ್ಸ್‌ ಎಂಬ ಅಭಿಯಾನ ಆರಂಭಿಸಿದೆ.  ಬೆಳವಣಿಗೆಯ ವೇಗ ಹೆಚ್ಚಿಸುವ ಬ್ರ್ಯಾಂಡ್‌ ಅನ್ನು ಪುನರ್‌ ಸ್ಥಾಪಿಸುವ ಮತ್ತು  ಮಧ್ಯಮ ವಲಯದ ಮಾರುಕಟ್ಟೆ ವಿಭಾಗದತ್ತ ಹೆಚ್ಚಿನ ಗಮನ ಕೇಂದ್ರೀಕರಿಸುವ ಅಭಿಯಾನ ಇದಾಗಿದೆ.

ಅಭಿಯಾನದ ಭಾಗವಾಗಿ ಕಂಪನಿಯು ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತ ಮಾತ್ರವಲ್ಲದೆ ಪುಣೆಯ ರಿಯಲ್ ಎಸ್ಟೇಟ್ ಮಾರುಕಟ್ಟೆಯತ್ತ ಗಮನ ಕೇಂದ್ರೀಕರಿಸಿದೆ. ಭಾರತದ ಮಧ್ಯಮ ವಿಭಾಗದ ರಿಯಲ್ ಎಸ್ಟೇಟ್ ಬ್ರ್ಯಾಂ‌‌ಡ್‌ಗಳಲ್ಲಿ ಅತ್ಯಂತ ಮೌಲ್ಯಯುತ, ನಂಬಿಕಾರ್ಹ ಮತ್ತು ಆದ್ಯತೆಯ ಸಂಸ್ಥೆಗಳಲ್ಲಿ ಒಂದಾಗುವ ಗುರಿ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಎಸ್‌ಪಿಎಲ್‌ ನೆಕ್ಸ್ಟ್‌ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಸಂಸ್ಥೆಯು ತನ್ನ ಮಾರಾಟವನ್ನು ದುಪ್ಪಟ್ಟುಗೊಳಿಸಲು ನಿರ್ಧರಿಸಿದೆ. ಆದಾಯವನ್ನು ಮೂರು  ಪಟ್ಟು ಹೆಚ್ಚಿಸಲು ಮತ್ತು ಲಾಭವನ್ನು ನಾಲ್ಕು ಪಟ್ಟು ಹೆಚ್ಚಿಸುವ ಗುರಿ ಹೊಂದಿದೆ.

ಬೆಂಗಳೂರು, ಚೆನ್ನೈ, ಪುಣೆಯಲ್ಲಿ ಗಮನ ಕೇಂದ್ರೀಕರಿಸಿ ಒಟ್ಟಾರೆ ಮಾರಾಟವನ್ನು 20ಕ್ಕೂ ಹೆಚ್ಚಿನ ಎಂಎಸ್‌ಎಫ್ ಆಗಿಸುವ ಗುರಿ ಹೊಂದಿದೆ. ಕೋಲ್ಕತ್ತ ಪ್ರಮುಖ ಕೊಡುಗೆದಾರ ನಗರವಾಗಿ ಇರಲಿದೆ. ಕಾಲ ಪರೀಕ್ಷಿಸಿರುವ ತನ್ನ ಕಾರ್ಯಾಚರಣೆ ವೇದಿಕೆಯನ್ನು ಎಸ್‌ಪಿಎಲ್ ಬಳಸಲಿದೆ ಎಂದು ತಿಳಿಸಿದೆ.

ಎಸ್‌ಪಿಎಲ್ ತನ್ನ ಯೋಜನೆಯಡಿ 42 ಪ್ರಾಜೆಕ್ಟ್‌ಗಳನ್ನು ಹೊಂದಿದೆ. ಇವು 42 ಎಂಎಸ್‌ಎಫ್ ಅಭಿವೃದ್ಧಿ ಸಾಮರ್ಥ್ಯ ಹೊಂದಿವೆ. ಇವುಗಳಲ್ಲಿ 24 ಎಂಎಸ್‌ಎಫ್‌ಗಳಷ್ಟು ಯೋಜನೆಗಳ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ 18 ಎಂಎಸ್‌ಎಫ್‌ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕಂಪನಿ ತಿಳಿಸಿದೆ.

ರೇರಾ ಪರಿಚಯಿಸಲಾದ ಕಳೆದ ಏಳು ವರ್ಷಗಳಲ್ಲಿ ಎಸ್‌ಪಿಎಲ್ ಗಮನಾರ್ಹ  ಪ್ರಮಾಣದ ವಿಸ್ತರಣೆ ಸಾಧಿಸಿದೆ. ಸಂಸ್ಥೆಯ ಮಾರಾಟ ಪ್ರಮಾಣ 3.5 ಪಟ್ಟು ಹೆಚ್ಚಿದೆ. ಮಾರಾಟ ಮೌಲ್ಯವು 5 ಪಟ್ಟು ಹೆಚ್ಚಿದ್ದು, ₹2,362 ಕೋಟಿಗೆ ತಲುಪಿದೆ. ಜೊತೆಗೆ, ವಾರ್ಷಿಕವಾಗಿ ಹಸ್ತಾಂತರಗಳು 4 ಪಟ್ಟು ಹೆಚ್ಚಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT