ಬೆಂಗಳೂರು: ಬೆಂಗಳೂರಿನ ರಿಟೇಲ್ ಮಾರುಕಟ್ಟೆಯಲ್ಲಿ ಶನಿವಾರ ನಡೆದ ವಹಿವಾಟಿನಲ್ಲಿ ಕೆ.ಜಿ ಬೆಳ್ಳಿ ದರವು ಮತ್ತೆ ₹3 ಲಕ್ಷದ ಗಡಿ ದಾಟಿದೆ.

10 ಗ್ರಾಂ ಚಿನ್ನದ ದರವು (ಶೇ 99.9ರಷ್ಟು ಪರಿಶುದ್ಧತೆ) ₹1,73,750ರಂತೆ ಮಾರಾಟವಾಗಿದ್ದರೆ, ಬೆಳ್ಳಿ ₹3,00,700ಕ್ಕೆ ತಲುಪಿದೆ.

ಈ ವರ್ಷದ ಜನವರಿ 1ರಂದು ಕೆ.ಜಿ ಬೆಳ್ಳಿ ಧಾರಣೆ ₹2,42,300 ಆಗಿತ್ತು, ಚಿನ್ನದ ದರವು ₹1,39,100 ಆಗಿತ್ತು. ಫೆಬ್ರುವರಿ 2ರಂದು ಈ ದರವು ಕ್ರಮವಾಗಿ ₹2,70,900 ಮತ್ತು ₹1,56,050ಕ್ಕೆ ತಲುಪಿತ್ತು.

ಜನವರಿ 19ರಂದು ಬೆಳ್ಳಿ ಧಾರಣೆಯು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೂರು ಲಕ್ಷದ ಗಡಿ ದಾಟಿ, ₹3,07,900 ಆಗಿತ್ತು. ಇದಾದ ಹತ್ತೇ ದಿನಗಳಲ್ಲಿ (ಜನವರಿ 29ರಂದು) ಬೆಳ್ಳಿ ದರವು ₹4,10,900 ಆಗಿತ್ತು. ಆಗ ಚಿನ್ನದ ಬೆಲೆಯು ₹1,84,200 ಆಗಿತ್ತು. ಚಿನ್ನ ಮತ್ತು ಬೆಳ್ಳಿಯ ದರವು ಈ ದಾಖಲೆ ಬರೆದ ಬಳಿಕ ಕ್ರಮೇಣವಾಗಿ ಇಳಿಕೆ ಕಂಡಿವೆ.

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ರಾಜಕೀಯ ಅನಿಶ್ಚಿತತೆ, ಅಮೆರಿಕದಲ್ಲಿನ ಸುಂಕ, ಲಾಭ ಗಳಿಕೆಗಾಗಿ ಹೂಡಿಕೆದಾರರು ಅಮೂಲ್ಯ ಲೋಹಗಳನ್ನು ಮಾರಾಟ ಮಾಡಲು ಮುಂದಾಗಿದ್ದು, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿಮೆ ಮಾಡಬಹುದು ಎಂಬ ನಿರೀಕ್ಷೆ, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿನ ಡಾಲರ್ ಮೌಲ್ಯ ಏರಿಳಿತವು ಸೇರಿದಂತೆ ವಿವಿಧ ಅಂಶಗಳು ಚಿನ್ನ ಮತ್ತು ಬೆಳ್ಳಿ ಧಾರಣೆಯ ಏರಿಳಿತಕ್ಕೆ ಕಾರಣವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.