ಶಿರಸಿ: ಮಲೆನಾಡಿನ ಆಲೆಮನೆಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸುವ ಬೆಲ್ಲಕ್ಕೆ ಬಂಪರ್ ಬೆಲೆ ಬಂದಿದ್ದು, ಕಬ್ಬು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಶಿರಸಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಡಿಸೆಂಬರ್ ತಿಂಗಳಿನಿಂದ ಆಲೆಮನೆಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕಬ್ಬಿನ ಗದ್ದೆಯ ಪಕ್ಕದಲ್ಲಿ ಗಾಣ ಹಾಕಿ, ಸಾಂಪ್ರದಾಯಿಕ ಮತ್ತು ರಾಸಾಯನಿಕ ರಹಿತವಾಗಿ ಬೆಲ್ಲ ತಯಾರಿಸುವ ರೈತರು ಅದನ್ನು ಮಾರಾಟ ಮಾಡುತ್ತಿದ್ದಾರೆ.

ಈ ಬಾರಿಯ ಬೆಲ್ಲ ತಯಾರಿಕೆ ಹಂಗಾಮಿನ ಆರಂಭದಲ್ಲೇ ರೈತರಿಗೆ ಒಂದು ಡಬ್ಬಿ (25 ಕೆ.ಜಿ) ಬೆಲ್ಲಕ್ಕೆ ₹2,600 ದರ ದೊರೆತಿದೆ. ಬೆಲ್ಲದ ಬೇಡಿಕೆ ಹೆಚ್ಚಿದಂತೆ ಖರೀದಿ ದರದಲ್ಲಿ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಂದು ಡಬ್ಬಿ ಬೆಲ್ಲಕ್ಕೆ ₹1 ಸಾವಿರ ಬೆಲೆ ಹೆಚ್ಚಳವಾಗಿದೆ.

‘ಒಂದೆಡೆ ಕಬ್ಬು ಬೆಳೆಗಾರರ ಸಂಖ್ಯೆ ಕಡಿಮೆಯಾದರೆ, ಮತ್ತೊಂದೆಡೆ ಕೃಷಿ ಕಾರ್ಮಿಕರ ಕೊರತೆ ಕಾಡುತ್ತಿದೆ. ನಿರ್ವಹಣೆ ವೆಚ್ಚ ಹೆಚ್ಚಳದ ಜೊತೆಗೆ ಮಳೆಯಿಂದ ಆಗಿರುವ ಹಾನಿ ಮತ್ತು ಬೆಲ್ಲ ತಯಾರಿಕೆಯ ಕಚ್ಚಾ ವಸ್ತುಗಳ ಕೊರತೆ ಕಾಡುತ್ತಿದೆ’ ಎಂದು ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಘದ ಸಲಹೆಗಾರ ವಿಶ್ವೇಶ್ವರ ಭಟ್ ತಿಳಿಸಿದರು.

‘ಈ ಮೊದಲು ಸ್ಥಳೀಯ ಗ್ರಾಹಕರಷ್ಟೇ ಬೆಲ್ಲ ಖರೀದಿಸುತ್ತಿದ್ದರು. ಈಗ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಕುಂದಾಪುರದ ಜನರು ಬೆಲ್ಲ ಕೊಳ್ಳಲೆಂದೇ ಶಿರಸಿಗೆ ಬರುತ್ತಾರೆ. ಶಿರಸಿಯೊಂದರಲ್ಲೇ ವಾರ್ಷಿಕ ₹2 ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತದೆ’ ಎಂದು ವಿವರಿಸಿದರು.

‘ಕದಂಬ ಮಾರ್ಕೆಟಿಂಗ್, ಟಿಎಸ್ಎಸ್ ಮತ್ತು ಉತ್ತರ ಕನ್ನಡ ಜಿಲ್ಲಾ ಸಾವಯವ ಒಕ್ಕೂಟಗಳು ವಾರ್ಷಿಕವಾಗಿ ಸರಾಸರಿ 25 ಕೆ.ಜಿ ತೂಕದ 10 ಸಾವಿರ ಡಬ್ಬಿ ಬೆಲ್ಲ ಖರೀದಿಸಿ ಮಾರುತ್ತಿವೆ. ಉಳಿದಂತೆ ಖಾಸಗಿಯಾಗಿಯೂ ಇಷ್ಟೇ ಪ್ರಮಾಣದ ಬೆಲ್ಲ ಮಾರಲಾಗುತ್ತಿದೆ’ ಎಂದರು.

ಕಳೆದ ವರ್ಷದ ಹಂಗಾಮಿನ ಆರಂಭದಲ್ಲಿ ಡಬ್ಬಿಯೊಂದಕ್ಕೆ ₹1,400 ದರವಿದ್ದರೂ, ಉತ್ಪನ್ನದ ಕೊರತೆಯಿಂದಾಗಿ ಬೆಲ್ಲದ ಬೆಲೆ ₹1,600ಕ್ಕೆ ಏರಿತ್ತು. ಬೆಲ್ಲ ತಯಾರಿಸುವ ಹಲವು ರೈತರಿಗೆ ಈ ದರ ಲಭಿಸಿರಲಿಲ್ಲ. ಈ ಬಾರಿ ಎಲ್ಲರಿಗೂ ಲಾಭ ದೊರೆಯಲಿದೆ’ ಎಂದು ತಿಳಿಸಿದರು.

ಹಿಂದಿನ ವರ್ಷಗಳಲ್ಲಿ ಬೆಲ್ಲದ ಬೆಲೆ ಕುಸಿದಾಗ ಅನೇಕ ರೈತರು ನಷ್ಟದಿಂದ ಕಬ್ಬು ಬೆಳೆಯುವುದನ್ನು ಬಿಟ್ಟಿದ್ದರು. ಈಗ ಬೆಲ್ಲ ತಯಾರಿಸುವ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಗುತ್ತಿದೆ
ಶ್ರೀಧರ ಹೆಗಡೆ ಶಿರಸಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.