ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಜಾಗತಿಕ ಸಾಲದ ಕುರಿತಾಗಿ ನಿರ್ಮಲಾ - ಗೋಪಿನಾಥ್ ಚರ್ಚೆ

Last Updated 12 ಏಪ್ರಿಲ್ 2023, 4:51 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಜಾಗತಿಕ ಸಾಲ ದೋಷಗಳು ಸೇರಿದಂತೆ ಹಲವು ವಿಷಯಗಳ ಕುರಿತು ಸೀತಾರಾಮನ್ ಹಾಗೂ ಗೋಪಿನಾಥ್ ಚರ್ಚೆ ನಡೆಸಿದರು ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ವಿಶ್ವಬ್ಯಾಂಕ್ ಮತ್ತು ಐಎಂಎಫ್‌ನ ವಾರ್ಷಿಕ ಸಭೆಯಲ್ಲಿ ಸೀತಾರಾಮನ್ ನೇತೃತ್ವದ ಭಾರತ ಉನ್ನತ ನಿಯೋಗವು ಭಾಗವಹಿಸುತ್ತಿದೆ.

ಈ ಸಂದರ್ಭದಲ್ಲಿ ನಿರ್ಮಲಾ, ಬೆಳೆಯುತ್ತಿರುವ ಜಾಗತಿಕ ಸಾಲದ ದೋಷಗಳನ್ನು ಬಗೆಹರಿಸಲು ಭಾರತದ ಬದ್ಧತೆಯನ್ನು ಪ್ರತಿಪಾದಿಸಿದರು.

ಭಾರತದ ಜಿ20 ಅಧ್ಯಕ್ಷತೆಗೆ ಐಎಎಫ್ ಬೆಂಬಲವನ್ನು ಸೀತಾರಾಮನ್ ಉಲ್ಲೇಖ ಮಾಡಿದರು.

ಕ್ರಿಪ್ಟೊ ಆಸ್ತಿಗಳನ್ನು ನಿರ್ವಹಣೆಗೆ ಫಲಪ್ರದ ಚರ್ಚೆಗಳಿಗೆ ಸೀತಾರಾಮನ್ ಅವರನ್ನು ಗೋಪಿನಾಥ್ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT