ಸ್ಲೀಪ್‌ವೆಲ್‌ ಹೊಸ ಉತ್ಪನ್ನ

7

ಸ್ಲೀಪ್‌ವೆಲ್‌ ಹೊಸ ಉತ್ಪನ್ನ

Published:
Updated:
Prajavani

ಬೆಂಗಳೂರು: ಸ್ಲೀಪ್‍ವೆಲ್ ಉತ್ಪನ್ನಗಳನ್ನು ತಯಾರಿಸುವ ಶೀಲಾ ಫೋಮ್ ಕಂಪನಿಯು, ನೆಮ್ಮದಿಯ ನಿದ್ದೆಗೆ ನೆರವಾಗುವ ಸಂಪೂರ್ಣ ಶ್ರೇಣಿಯ ಹೊಸ ಹೋಂ ಕಂಫರ್ಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಹೊಸ ಉತ್ಪನ್ನಗಳ ಶ್ರೇಣಿಯಲ್ಲಿ ಕಾನ್ಸೆಪ್ಟ್ ಪಿಲ್ಲೊ, ಚಿತ್ತಾಕರ್ಷಕ ವಿನ್ಯಾಸಗಳನ್ನು ಹೊಂದಿರುವ ಬೆಡ್‌ಶೀಟ್‍, ಐಷಾರಾಮಿ ಕಂಫರ್ಟರ್‌, ಬೆಚ್ಚಗಿನ ಬ್ಲ್ಯಾಂಕೆಟ್‍ ಹಾಗೂ ಮ್ಯಾಟ್ರಸ್ ಪ್ರೊಟೆಕ್ಟರ್‌ಗಳು ಸೇರಿವೆ. ಆರಾಮದಾಯಕ ನಿದ್ದೆಗೆ ಬೇಕಾದ ಎಲ್ಲಾ ಉತ್ಪನ್ನಗಳನ್ನೂ ಈಗ ಸ್ಲೀಪ್‌ವೆಲ್‌ ಹೊಂದಿದಂತಾಗಿದೆ. ಈ ಎಲ್ಲ ಉತ್ಪನ್ನಗಳು ಒಂದೇ ಕಡೆ ಲಭ್ಯ ಇರಲಿವೆ.

‘ಈ ಹೋಂ ಕಂಫರ್ಟ್ ಉತ್ಪನ್ನಗಳು ದೇಶದಾದ್ಯಂತ ಇರುವ ಎಲ್ಲಾ ಸ್ಲೀಪ್‍ವೆಲ್ ಮಾರಾಟ ಮಳಿಗೆಗಳಲ್ಲಿ ಲಭ್ಯ ಇರಲಿವೆ’ ಎಂದು  ಶೀಲಾ ಫೋಮ್‍ನ ಸಿಇಒ ರಾಕೇಶ್ ಚಹರ್ ಅವರು ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !