ಭಾನುವಾರ, ಅಕ್ಟೋಬರ್ 17, 2021
23 °C

Flipkart ಬಿಗ್‌ ಬಿಲಿಯನ್ ಡೇಸ್: ಮೂರನೆಯ ಹಂತದ ನಗರಗಳಿಂದ ಶೇ 45ರಷ್ಟು ಬೇಡಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫ್ಲಿಪ್‌ಕಾರ್ಟ್‌ ಕಂಪನಿಯು ಹಬ್ಬಗಳ ಸಂದರ್ಭದಲ್ಲಿ ಆಯೋಜಿಸಿರುವ ‘ಬಿಗ್‌ ಬಿಲಿಯನ್ ಡೇಸ್’ ಮಾರಾಟ ಮೇಳದಲ್ಲಿ, ಮೂರನೆಯ ಹಂತದ ನಗರಗಳಿಂದಲೇ ಶೇಕಡ 45ರಷ್ಟು ಬೇಡಿಕೆ ಬಂದಿದೆ ಎಂದು ಕಂಪನಿ ತಿಳಿಸಿದೆ.

ಮಾರಾಟ ಮೇಳ ಶುರುವಾದ ಮೊದಲ 24 ಗಂಟೆಗಳಲ್ಲಿ ಹೊಸದಾಗಿ 124 ಪಟ್ಟಣಗಳಿಂದ ಬೇಡಿಕೆಗಳು ಬಂದಿವೆ ಎಂದು ಅದು ತಿಳಿಸಿದೆ.

ದೇಶದ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್, ‘ಬಿಗ್ ಬಿಲಿಯನ್ ಡೇ 2021’ ವಾರ್ಷಿಕ ವಿಶೇಷ ಆಫರ್ ಸೇಲ್ ದಿನಾಂಕವನ್ನು ಕಳೆದ ವಾರ ಪ್ರಕಟಿಸಿದೆ.

12ನೇ ತಾರೀಕಿನವರೆಗೆ ಒಟ್ಟು ಆರು ದಿನಗಳ ಕಾಲ ವಿಶೇಷ ಸೇಲ್ ನಡೆಯಲಿದೆ.

ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವ ಹೊಂದಿರುವವರಿಗೆ ಸೇಲ್ ಮೊದಲೇ ಆರಂಭವಾದರೆ, ಪ್ಲಸ್ ಸದಸ್ಯತ್ವ ಇಲ್ಲದವರು ಸೂಪರ್‌ಕಾಯಿನ್ ಬಳಸಿ, ಅದರ ಮೂಲಕ ಆಫರ್ ಸೇಲ್ ಪ್ರಯೋಜನ ಪಡೆಯಬಹುದು.

ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಶೇ. 10 ರಿಯಾಯಿತಿ, ಪೇಟಿಎಂ ಕ್ಯಾಶ್‌ಬ್ಯಾಕ್ ಕೊಡುಗೆ ಕೂಡ ಲಭ್ಯವಾಗಲಿದೆ.

ಬಿಗ್ ಬಿಲಿಯನ್ ಡೇ ಸೇಲ್ ಸಂದರ್ಭದಲ್ಲಿ ವಿವಿಧ ಹೊಸ ಉತ್ಪನ್ನಗಳ ಬಿಡುಗಡೆಯೂ ನಡೆಯಲಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು