ನವದೆಹಲಿ: ದೇಶದ ಸ್ಮಾರ್ಟ್ಫೋನ್ ರಫ್ತು ಆಗಸ್ಟ್ ತಿಂಗಳಿನಲ್ಲಿ ಶೇ 39ರಷ್ಟು ಏರಿಕೆಯಾಗಿದೆ ಎಂದು ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಗುರುವಾರ ತಿಳಿಸಿದೆ.

2024ರ ಆಗಸ್ಟ್ ತಿಂಗಳಿನಲ್ಲಿ ಒಟ್ಟು ₹9,668 ಕೋಟಿ ಮೌಲ್ಯದ ಸ್ಮಾರ್ಟ್ಫೋನ್ಗಳು ರಫ್ತಾಗಿದ್ದವು. ಪ್ರಸಕ್ತ ವರ್ಷದ ಆಗಸ್ಟ್ನಲ್ಲಿ ಈ ರಫ್ತು ಪ್ರಮಾಣ ₹13,572 ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.

ಇದೇ ಅವಧಿಯಲ್ಲಿ ಅಮೆರಿಕಕ್ಕೆ ಈ ಪೈಕಿ ₹8,559 ಕೋಟಿಯಷ್ಟು ಮೌಲ್ಯದ ಸ್ಮಾರ್ಟ್ಫೋನ್ ರಫ್ತಾಗಿವೆ. ಕಳೆದ ವರ್ಷದ ಆಗಸ್ಟ್ಗೆ ಹೋಲಿಸಿದರೆ ರಫ್ತು ಶೇ 148ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಆಗಸ್ಟ್ವರೆಗೆ ಅಮೆರಿಕಕ್ಕೆ ದೇಶದ ಸ್ಮಾರ್ಟ್ಫೋನ್ ರಫ್ತು ₹74,778 ಕೋಟಿಯಷ್ಟಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹25,547 ಕೋಟಿಯಾಗಿದ್ದು, ಮೂರು ಪಟ್ಟು ರಫ್ತು ಹೆಚ್ಚಳ ಕಂಡಿದೆ ಎಂದು ಹೇಳಿದೆ.

2024-25ರ ಪೂರ್ಣ ಆರ್ಥಿಕ ವರ್ಷದಲ್ಲಿ ಅಮೆರಿಕಕ್ಕೆ ₹93,676 ಕೋಟಿ ಮೌಲ್ಯದ ಸ್ಮಾರ್ಟ್ಫೋನ್ ರಫ್ತಾಗಿದ್ದವು. ಪ್ರಸಕ್ತ ವರ್ಷದ ಏಪ್ರಿಲ್-ಆಗಸ್ಟ್ ಅಂಕಿ ಅಂಶದ ಪ್ರಕಾರ ಈ ರಫ್ತಿನ ಶೇ 80ರಷ್ಟನ್ನು ಈಗಾಗಲೇ ತಲುಪಿದೆ ಎಂದು ತಿಳಿಸಿದೆ.

‘ಹಿಂದಿನ ಐದು ಆರ್ಥಿಕ ವರ್ಷದ ಅಂಕಿ ಅಂಶಗಳಿಗೆ ಹೋಲಿಸಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಅರ್ಧದಲ್ಲಿ ದೇಶದ ಸ್ಮಾರ್ಟ್ಫೋನ್ಗಳ ರಫ್ತು ಇಳಿದಿದೆ’ ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದ್ದಾರೆ.

ಕಂಪನಿಗಳು ಸೆಪ್ಟೆಂಬರ್ ಕೊನೆಯಲ್ಲಿ ಮತ್ತು ಅಕ್ಟೋಬರ್ನಲ್ಲಿ ಹಬ್ಬದ ಋತುವಿನ ಮುಂಚಿತವಾಗಿ ಹೊಸ ಮಾದರಿಯ ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಫೋನ್ಗಳಿಗಾಗಿ, ಗ್ರಾಹಕರು ಕಾಯುತ್ತಿದ್ದಾರೆ. ಇದರಿಂದ ಖರೀದಿ ಪ್ರಮಾಣ ಕಡಿಮೆ ಆಗಿದೆ’ ಎಂದು ತಿಳಿಸಿದ್ದಾರೆ.

ಹಳೆಯ ಮಾದರಿ ಫೋನ್ ಖರೀದಿಸುವ ಗ್ರಾಹಕರು ಸಹ ಹೊಸ ಮಾದರಿಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕಾರಣ ಹಳೆಯ ಮಾದರಿ ಫೋನ್ಗಳ ಮೇಲೆ ಹೆಚ್ಚಿನ ರಿಯಾಯಿತಿ ಸಿಗಲಿದೆ. ಹೀಗಾಗಿ, ಹಳೆಯ ಮಾದರಿ ಫೋನ್ಗಳ ರಫ್ತು ಸಹ ಕಡಿಮೆಯಾಗಿದೆ. ಆದರೆ, ಅಕ್ಟೋಬರ್ ವೇಳೆಗೆ ರಫ್ತು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಕ್ರಿಸ್ಮಸ್ ಹೊಸ ವರ್ಷದ ಆಚರಣೆಯಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಹೆಚ್ಚಳವಾಗಲಿದೆ
ಪಂಕಜ್ ಮೊಹಿಂದ್ರೂ ಐಸಿಇಎ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.