ಬೆಂಗಳೂರು: ‘ಮುಂದಿನ ಮೂರು ವರ್ಷದಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌರಫಲಕಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ’ ಎಂದು ಸೆಲ್ಕೋ ಫೌಂಡೇಷನ್ನ ಸಿಇಒ ಹರೀಶ್ ಹಂದೆ ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ರಾಯಚೂರು, ಕಲಬುರಗಿ, ಯಾದಗಿರಿ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ 2,500 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್ಸಿ) ಸೌರಫಲಕ ಅಳವಡಿಸಲಾಗಿದೆ. ಅಲ್ಲಿ ಉತ್ಪಾದನೆಯಾದ ವಿದ್ಯುತ್ನಿಂದಲೇ ಆಸ್ಪತ್ರೆಯ ಹಲವು ಕೆಲಸಗಳು ನಡೆಯುತ್ತಿವೆ. ಈ ಸೌರಫಲಕಗಳನ್ನು ಅಳವಡಿಸಲು ಐಕಿಯಾ ಮತ್ತು ರಾಜ್ಯ ಸರ್ಕಾರ ಹಣಕಾಸಿನ ನೆರವು ನೀಡಿದೆ ಎಂದು ಸೋಮವಾರ ಹೇಳಿದರು.

ರಾಜ್ಯದ 10 ಲಕ್ಷ ಮಹಿಳೆಯರು ಸೆಲ್ಕೋ ಫೌಂಡೇಷನ್ ನೆರವಿನಿಂದ ಸ್ಥಾಪಿಸಿದ ಸೌರ ವಿದ್ಯುತ್ ಅನ್ನು ಹೊಲಿಗೆ ಯಂತ್ರ, ಖಾರದ ಪುಡಿ ಮಾಡುವ ಯಂತ್ರ, ರೊಟ್ಟಿ ಯಂತ್ರಗಳಿಗೆ ಬಳಸುತ್ತಿದ್ದಾರೆ. ಇದು ಅವರ ಜೀವನೋಪಾಯಕ್ಕೆ ನೆರವಾಗಿದೆ ಎಂದರು.

ಇದೇ ವೇಳೆ ಅಂತರರಾಷ್ಟ್ರೀಯ ಸೌರ ಒಕ್ಕೂಟವು (ಐಎಸ್ಎ) ಸೆಲ್ಕೋ ಫೌಂಡೇಷನ್ ಜೊತೆಗೆ ಒಪ್ಪಂದ ಮಾಡಿಕೊಂಡಿತು.

ಈ ಒಪ್ಪಂದದ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಆಫ್ರಿಕಾದ 30 ದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌರ ಫಲಕ ಅಳವಡಿಸುವುದು, ಸೌರ ಫಲಕ ಅಳವಡಿಕೆಗೆ ಹಣಕಾಸಿನ ನೆರವು ಸಿಗುವಂತೆ ಮಾಡಲಾಗುತ್ತದೆ ಎಂದು ಹಂದೆ ತಿಳಿಸಿದರು. ‘ಇಲ್ಲಿ ನಾವು ನಡೆಸುವ ಕಾರ್ಯಕ್ರಮಗಳನ್ನು ಅಲ್ಲಿಯೂ ನಡೆಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.