ಮಂಗಳವಾರ, ಮಾರ್ಚ್ 28, 2023
23 °C

ವಿಮಾನ ಟಿಕೆಟ್‌: ಕಂತುಗಳಲ್ಲಿ ಪಾವತಿಗೆ ಸ್ಪೈಸ್‌ಜೆಟ್‌ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ಪೈಸ್‌ ಜೆಟ್‌ ವಿಮಾನಯಾನ ಕಂಪನಿಯು ವಿಮಾನ ಟಿಕೆಟ್ ದರವನ್ನು ಮೂರು ಅಥವಾ 12 ತಿಂಗಳ ಕಂತುಗಳಲ್ಲಿ ಪಾವತಿಸುವ ಹೊಸ ಯೋಜನೆಗೆ ಸೋಮವಾರ ಚಾಲನೆ ನೀಡಿದೆ.

ಹೊಸ ಯೋಜನೆಯ ಅಡಿಯಲ್ಲಿ, ಗ್ರಾಹಕರು ಹೆಚ್ಚುವರಿ ಶುಲ್ಕ ಅಥವಾ ಬಡ್ಡಿ ಪಾವತಿಯ ಗೊಡವೆ ಇಲ್ಲದೆಯೇ ಟಿಕೆಟ್ ಮೊತ್ತವನ್ನು ಮೂರು ತಿಂಗಳ ಇಎಂಐ ಮೂಲಕ ಪಾವತಿ ಮಾಡಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಇಎಂಐ ಯೋಜನೆಯನ್ನು ಪಡೆಯಲು ಗ್ರಾಹಕರು ಪ್ಯಾನ್‌ ಸಂಖ್ಯೆ, ಆಧಾರ್‌ ಸಂಖ್ಯೆ ಅಥವಾ ವಿಐಡಿ ನೀಡಬೇಕಾಗುತ್ತದೆ. ಅಲ್ಲದೆ ಒಂದು ಬಾರಿ ಬಳಸಬಹುದಾದ ಪಾಸ್‌ವರ್ಡ್‌ (ಒಟಿಪಿ) ಮೂಲಕ ದೃಢೀಕರಿಸಬೇಕಾಗುತ್ತದೆ.

ಮೊದಲ ಇಎಂಐ ಕಂತನ್ನು ಗ್ರಾಹಕರು ತಮ್ಮ ಯುಪಿಐ ಐಡಿ ನೀಡಿ ಪಾವತಿಸಬೇಕಾಗುತ್ತದೆ. ಗ್ರಾಹಕರ ಯುಪಿಐ ಐಡಿಯಿಂದ ಇಎಂಐ ಮೊತ್ತವನ್ನು ಕಡಿತ ಮಾಡಲಾಗುತ್ತದೆ. ಇಎಂಐ ಯೋಜನೆಯನ್ನು ಪಡೆಯಲು ಗ್ರಾಹಕರು ತಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮಾಹಿತಿ ನೀಡುವ ಅಗತ್ಯ ಇಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು