ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಸಂಗ್ರಹ: ಡಿಸೆಂಬರ್‌ 11ಕ್ಕೆ ಸ್ಪೈಸ್‌ಜೆಟ್‌ ಸಭೆ

Published 7 ಡಿಸೆಂಬರ್ 2023, 14:20 IST
Last Updated 7 ಡಿಸೆಂಬರ್ 2023, 14:20 IST
ಅಕ್ಷರ ಗಾತ್ರ

ಮುಂಬೈ: ಸ್ಪೈಸ್‌ಜೆಟ್‌ ಕಂಪನಿಯು ಬಂಡವಾಳ ಸಂಗ್ರಹಿಸಲು ಇರುವ ಆಯ್ಕೆಗಳನ್ನು ಪರಿಶೀಲಿಸಲು ಡಿಸೆಂಬರ್‌ 11ರಂದು ನಿರ್ದೇಶಕರ ಮಂಡಳಿ ಸಭೆ ನಡೆಸಲಿದೆ.

ಪ್ರವರ್ತಕ ಅಜಯ್ ಸಿಂಗ್‌ ಅವರು ₹ 833 ಕೋಟಿ ಬಂಡವಾಳ ಸಂಗ್ರಹಿಸಲು ಜಾಗತಿಕ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ವರದಿಗಳ ಬೆನ್ನಲ್ಲೇ ಕಂಪನಿಯು ಈ ಹೇಳಿಕೆ ನೀಡಿದೆ.

ಈಕ್ವಿಟಿ ಷೇರುಗಳು ಅಥವಾ ಪರಿವರ್ತಿಸಬಹುದಾದ ಸಾಲಪತ್ರಗಳನ್ನು ನೀಡುವ ಮೂಲಕ ಬಂಡವಾಳ ಸಂಗ್ರಹಿಸುವ ಆಯ್ಕೆಗಳನ್ನು ನಿರ್ದೇಶಕರ ಮಂಡಳಿಯು ಚರ್ಚೆ ನಡೆಸಲಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT