ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪೈಸ್‌ಜೆಟ್‌ ವಿಮಾನ ರದ್ದು– ಪ್ರಯಾಣಿಕರ ಪರದಾಟ

Published : 2 ಆಗಸ್ಟ್ 2024, 15:19 IST
Last Updated : 2 ಆಗಸ್ಟ್ 2024, 15:19 IST
ಫಾಲೋ ಮಾಡಿ
Comments

ಮುಂಬೈ: ದುಬೈನಿಂದ ಭಾರತದ ವಿವಿಧ ನಗರಗಳಿಗೆ ಸಂಚರಿಸಬೇಕಿದ್ದ ಸ್ಪೈಸ್‌ಜೆಟ್‌ನ 10 ವಿಮಾನಗಳ ಹಾರಾಟ ರದ್ದಾಗಿದ್ದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಪ್ರಸಂಗ ನಡೆದಿದೆ. 

ದುಬೈ ವಿಮಾನ ನಿಲ್ದಾಣ ವಿಭಾಗಕ್ಕೆ ಕಂಪನಿಯಿಂದ ಬಾಕಿ ಶುಲ್ಕ ಪಾವತಿ ಮಾಡಿಲ್ಲ. ಹಾಗಾಗಿ, ಬುಧವಾರದಿಂದ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಂಪನಿಯ ವಕ್ತಾರರು, ‘ವಿಮಾನಗಳ ಕಾರ್ಯಾಚರಣೆಯಲ್ಲಿ ತೊಂದರೆಯಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವಿಮಾನ ಸೇವೆ ಮತ್ತು ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸದ್ಯ ನಿಗದಿತ ಮಾರ್ಗಗಳಲ್ಲಿ ಸಂಚರಿಸಬೇಕಿದ್ದ ವಿಮಾನಗಳ ಕಾರ್ಯಾಚರಣೆಯು ಆರಂಭಗೊಂಡಿದೆ’ ಎಂದು ಹೇಳಿದ್ದಾರೆ.

ಸ್ಪೈಸ್‌ಜೆಟ್‌ನ ಪ್ರವರ್ತಕ ಅಜಯ್‌ ಸಿಂಗ್‌ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಇದರಿಂದ ಸಿಬ್ಬಂದಿಗೆ ವೇತನ ಪಾವತಿಗೂ ವಿಳಂಬವಾಗುತ್ತಿದೆ. 2022ರ ಜನವರಿಯಿಂದ 11,581 ಸಿಬ್ಬಂದಿಗೆ ಕಂಪನಿಯು ತನ್ನ ಪಾಲಿನ ಇಪಿಎಫ್‌ ಕೊಡುಗೆಯನ್ನು ‍ಪಾವತಿಸಿಲ್ಲ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT