ಸ್ಟಾರ್ಟ್‌ಅಪ್‌: ಮಹಿಳೆಯರಿಗೆಬ್ರಿಟಾನಿಯಾ ನೆರವಿನ ಹಸ್ತ

ಬುಧವಾರ, ಮಾರ್ಚ್ 27, 2019
26 °C

ಸ್ಟಾರ್ಟ್‌ಅಪ್‌: ಮಹಿಳೆಯರಿಗೆಬ್ರಿಟಾನಿಯಾ ನೆರವಿನ ಹಸ್ತ

Published:
Updated:
Prajavani

ಬೆಂಗಳೂರು: ಉದ್ಯಮಶೀಲತೆ ಪ್ರೋತ್ಸಾಹಿಸಲು ಬ್ರಿಟಾನಿಯ ಮಾರಿ ಗೋಲ್ಡ್ ಕಂಪನಿಯು ಹತ್ತು ಮಹಿಳೆಯರನ್ನು ಗುರುತಿಸಿ ಅವರಿಗೆ ತಲಾ ₹ 10 ಲಕ್ಷ  ನೀಡಿದೆ.

‘ಬ್ರಿಟಾನಿಯ ಮಾರಿ ಗೋಲ್ಡ್ ಮೈ ಸ್ಟಾರ್ಟ್‌ಅಪ್ ಅಭಿಯಾನ’ದಲ್ಲಿ ಆಯ್ಕೆಯಾದವರಿಗೆ ಈ ಬಹುಮಾನದ ಮೊತ್ತ ನೀಡಲಾಗಿದೆ.

ಗೃಹಿಣಿಯರಿಗೆ ಉದ್ಯಮಶೀಲತೆ ಕಲ್ಪಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಆರಂಭಿಸಿದ್ದ ಸ್ಟಾರ್ಟ್‌ಅಪ್ ಅಭಿಯಾನಕ್ಕೆ  ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ 42 ಮಹಿಳೆಯರಲ್ಲಿ 10 ಮಂದಿಯನ್ನು ಆಯ್ಕೆ ಮಾಡಲಾಗಿದೆ.

‘ಬ್ರಿಟಾನಿಯ ಮಾರಿ ಗೋಲ್ಡ್ ಕಂಪನಿಯು ಇದೇ ಮೊದಲ ಬಾರಿಗೆ ಇಂತಹ ಅಭಿಯಾನ ನಡೆಸಿದೆ. ಗೃಹಿಣಿಯರ ಸಬಲೀಕರಣವೇ ಇದರ ಮುಖ್ಯ ಉದ್ದೇಶವಾಗಿತ್ತು’ ಎಂದು ಬ್ರಿಟಾನಿಯ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಉಪಾಧ್ಯಕ್ಷ ಅಲಿ ಹ್ಯಾರಿಸ್ ಶೇರೆ ಹೇಳಿದ್ದಾರೆ.

ನಗದು ಬಹುಮಾನ ಪಡೆದವರಲ್ಲಿ ಬೆಂಗಳೂರಿನ  ಸ್ನೇಹಾ ಕುಮಂದುರಿ (37) ಕೂಡ ಒಬ್ಬರಾಗಿದ್ದಾರೆ. ಸಾವಯವ ಪದಾರ್ಥ ಬಳಸಿ ಕರಕುಶಲ ಉತ್ಪನ್ನಗಳ ತಯಾರಿಸುವುದು, ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು ಅವರ ಉದ್ದೇಶವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !