ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 1ರಿಂದ ಉಕ್ಕಿನ ಬೆಲೆ ಏರಿಕೆ ನಿರೀಕ್ಷೆ: ಜೆಎಸ್‌ಪಿಎಲ್‌

Last Updated 29 ಜೂನ್ 2022, 13:18 IST
ಅಕ್ಷರ ಗಾತ್ರ

ನವದೆಹಲಿ: ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಉಕ್ಕಿನ ಬೆಲೆಯು ಜುಲೈ 1ರಿಂದ ಏರಿಕೆ ಆಗುವ ನಿರೀಕ್ಷೆ ಇದೆ ಎಂದು ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್ ಲಿಮಿಟೆಡ್‌ನ (ಜೆಎಸ್‌ಪಿಎಲ್) ವ್ಯವಸ್ಥಾಪಕ ನಿರ್ದೇಶಕ ವಿ.ಆರ್‌. ಶರ್ಮ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಸಂಘವು (ಐಸಿಸಿ) ಆಯೋಜಿಸಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬೆಲೆಗಳು ಈಗಾಗಲೇ ಕೆಳಮಟ್ಟದಲ್ಲಿ ಇವೆ. ಹೀಗಾಗಿ ಇನ್ನಷ್ಟು ಇಳಿಕೆ ಮಾಡಲು ಸಾಧ್ಯವಿಲ್ಲ. ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಜುಲೈ 1ರಿಂದ ಬೆಲೆಗಳು ಮತ್ತೆ ಏರುಮುಖವಾಗಿಲಿವೆ’ ಎಂದು ತಿಳಿಸಿದ್ದಾರೆ.

ಕಲ್ಲಿದ್ದಲಿನ ದರ ಪ್ರತಿ ಟನ್‌ಗೆ ₹ 17 ಸಾವಿರ ಇದೆ. ಒಡಿಶಾ ಮಿನರಲ್‌ ಕಾರ್ಪೊರೇಷನ್‌ ನೀಡುವ ಕಬ್ಬಿಣದ ಅದಿರಿನ ಬೆಲೆಯು ಗರಿಷ್ಠ ಮಟ್ಟದಲ್ಲಿಯೇ ಇದೆ. ಒಡಿಶಾದಲ್ಲಿ ಕಬ್ಬಿಣದ ಅದಿರು ಪೂರೈಸುವ ಪ್ರಮುಖ ಕಂಪನಿ ಇದಾಗಿದೆ ಎಂದು ಹೇಳಿದ್ದಾರೆ.

ಸೆಕೆಂಡರಿ ಉಕ್ಕು ತಯಾರಕರು ರಿಬಾರ್‌ಗಳ ಬೆಲೆಯನ್ನು ನಾಲ್ಕು ದಿನಗಳಲ್ಲಿ ಪ್ರತಿ ಟನ್‌ಗೆ ₹ 2 ಸಾವಿರ ಹೆಚ್ಚಿಸಿದ್ದು, ಇದರಿಂದ ಬೆಲೆಯು ₹ 55 ಸಾವಿರ ತಲುಪಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT