ಬಿಎಸ್‌ಇ ಷೇರುಗಳು ಈ ಅವಧಿಯಲ್ಲಿ 10,266 ಅಂಶಗಳಷ್ಟು (ಶೇ 16.87) ಹೆಚ್ಚಳ ಆಗಿದೆ. ಡಿಸೆಂಬರ್ 20ರಂದು ಸ್ಮಾಲ್ ಕ್ಯಾಪ್ ಸೂಚ್ಯಂಕವು ತನ್ನ ಸಾರ್ವಕಾಲಿಕ ಗರಿಷ್ಠವಾದ 42,648 ಅಂಶ ಮತ್ತು ಮಿಡ್ ಕ್ಯಾಪ್ ಸೂಚ್ಯಂಕ 36,483 ಅಂಶಗಳಷ್ಟು ಏರುವ ಮೂಲಕ ಗರಿಷ್ಠಮಟ್ಟವನ್ನು ದಾಖಲಿಸಿತ್ತು. ಬಿಎಸ್‌ಇ ಮಾನದಂಡವು ಇದೇ ದಿನದಂದು 71,913 ಅಂಶಗಳಿಗೆ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿತ್ತು.