ಮುಂಬೈ: ಸತತ ಐದು ದಿನಗಳ ಇಳಿಕೆಯ ನಂತರ ಶುಕ್ರವಾರ ಷೇರು ಸೂಚ್ಯಂಕಗಳು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 75 ಅಂಶ ಏರಿಕೆಯಾಗಿ 73,961ಕ್ಕೆ ಕೊನೆಗೊಂಡಿತು. ದಿನದ ವಹಿವಾಟಿನ ವೇಳೆ 74,478 ಅಂಶವನ್ನು ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 42 ಅಂಶ ಹೆಚ್ಚಳವಾಗಿ 22,530ಕ್ಕೆ ಅಂತ್ಯಗೊಂಡಿತು.

ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ ಬ್ಯಾಂಕ್, ಪವರ್ಗ್ರಿಡ್, ಲಾರ್ಸೆನ್ ಆ್ಯಂಡ್ ಟೊಬ್ರೊ, ಐಸಿಐಸಿಐ ಬ್ಯಾಂಕ್ ಷೇರಿನ ಮೌಲ್ಯ ಗಳಿಕೆ ಕಂಡಿವೆ. ನೆಸ್ಲೆ ಇಂಡಿಯಾ, ಟಿಸಿಎಸ್, ಮಾರುತಿ ಸುಜುಕಿ ಇಂಡಿಯಾ, ಇನ್ಫೊಸಿಸ್, ಎಕ್ಸಿಸ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಇಳಿಕೆ ಕಂಡಿವೆ.

ಚುನಾವಣೆಯ ಪೂರ್ವದ ವ್ಯವಹಾರ ತಂತ್ರವು ಅಂತ್ಯಗೊಂಡಿದೆ. ಹೂಡಿಕೆದಾರರು ಕೊನೆಯ ಹಂತದ ಮತದಾನದ ಮುಕ್ತಾಯದ ನಂತರ ಬಿಡುಗಡೆ ಮಾಡಲಿರುವ ಮತಗಟ್ಟೆ ಸಮೀಕ್ಷೆ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಇದರಿಂದ ಷೇರು ಸೂಚ್ಯಂಕಗಳು ಏರಿಕೆಯಾಗಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.