ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‌ಎಸ್‌ಇ) ಮಂಗಳವಾರ ಮಧ್ಯಾಹ್ನ 1.45ರಿಂದ 2.45ರವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಮುಹೂರ್ತ ವಹಿವಾಟು ನಡೆಯಲಿದೆ.
ಮುಹೂರ್ತ ವಹಿವಾಟು ಹೊರತುಪಡಿಸಿದರೆ ಮಂಗಳವಾರ ಎಂದಿನ ವಹಿವಾಟು ಇರುವುದಿಲ್ಲ. ಬುಧವಾರ ಬಲಿಪಾಡ್ಯಮಿ ಅಂಗವಾಗಿ ಮಾರುಕಟ್ಟೆಗೆ ರಜೆ ಇರಲಿದೆ.
ಶುಭಪ್ರದವಾಗಿರುವ ಮುಹೂರ್ತ ವಹಿವಾಟಿನಲ್ಲಿ ತೊಡಗುವುದರಿಂದ ಸಮೃದ್ಧಿ ಮತ್ತು ಹಣಕಾಸಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ.