ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಆರೋಗ್ಯ ಪಾನೀಯ' ಪಟ್ಟಿಯಿಂದ ಬೋರ್ನ್‌ವಿಟಾ ತೆಗೆದುಹಾಕುವಂತೆ ಕೇಂದ್ರ ಆದೇಶ

Published 13 ಏಪ್ರಿಲ್ 2024, 13:12 IST
Last Updated 13 ಏಪ್ರಿಲ್ 2024, 13:12 IST
ಅಕ್ಷರ ಗಾತ್ರ

ನವದೆಹಲಿ: ಬೋರ್ನ್‌ವೀಟಾ ಸೇರಿ ವಿವಿಧ ಪಾನೀಯಗಳನ್ನು ‘ಆರೋಗ್ಯ ಪಾನೀಯ’ಗಳ ಪಟ್ಟಿಯಿಂದ ತೆಗೆದು ಹಾಕುವಂತೆ ಇ–ಕಾಮರ್ಸ್‌ ಕಂಪನಿಗಳಿಗೆ ಕೇಂದ್ರ ಸರ್ಕಾರವು ಸೂಚಿಸಿದೆ.

ಆರೋಗ್ಯ ಪಾನೀಯ ಕುರಿತು ಎಫ್‌ಎಸ್‌ಎಸ್ ಕಾಯ್ದೆ 2006ರ ಅಡಿ ವ್ಯಾಖ್ಯಾನಿಸಲಾಗಿದೆ. ಆದರೆ, ಕೆಲವು ಪಾನೀಯಗಳಲ್ಲಿ ಸ್ವೀಕಾರಾರ್ಹ ‍ಪ್ರಮಾಣಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಸಕ್ಕರೆ ಅಂಶವಿರುವ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನಡೆಸಿದ ತನಿಖೆಯಲ್ಲಿ ಬಯಲಾಗಿದೆ.

ಹಾಗಾಗಿ, ಅಂತಹ ಪಾನೀಯಗಳನ್ನು ಇ–ಕಾಮರ್ಸ್‌ ಕಂಪನಿಗಳು ತಮ್ಮ ವೇದಿಕೆಗಳಲ್ಲಿ ಇರುವ ಆರೋಗ್ಯ ಪಾನೀಯಗಳ ವಿಭಾಗದಲ್ಲಿ ಪ್ರದರ್ಶಿಸಬಾರದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಆದೇಶ ಹೊರಡಿಸಿದೆ. 

ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳನ್ನು ನಿರ್ದಿಷ್ಟವಾಗಿ ವರ್ಗೀಕರಿಸಬೇಕು ಎಂದು ಇತ್ತೀಚೆಗೆ ಆನ್‌ಲೈನ್‌ ಮೂಲಕ ಆಹಾರ ಪದಾರ್ಥಗಳನ್ನು ಪೂರೈಸುವ ಕಂಪನಿಗಳಿಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಸೂಚಿಸಿತ್ತು.

ಹಾಲಿನ ಉತ್ಪನ್ನ, ಕಾಳುಗಳು ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು ಇ–ಕಾಮರ್ಸ್‌ ವೇದಿಕೆಗಳಲ್ಲಿ ಆರೋಗ್ಯ ಪಾನೀಯಗಳು, ಶಕ್ತಿ ವರ್ಧಕ ಪೇಯಗಳೆಂದು ಪ್ರದರ್ಶನ ಮಾಡದಂತೆ ಕಟ್ಟುನಿಟ್ಟಾಗಿ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT