ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lay Off: ಸ್ವಿಗ್ಗಿಯಿಂದ 380 ನೌಕರರ ವಜಾ

Last Updated 20 ಜನವರಿ 2023, 13:50 IST
ಅಕ್ಷರ ಗಾತ್ರ

ನವದೆಹಲಿ: ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಕಂಪನಿಯು ಶುಕ್ರವಾರ 380 ನೌಕರರನ್ನು ವಜಾ ಮಾಡಿದೆ.

ಆರ್ಥಿಕ ಪರಿಸ್ಥಿತಿಯು ಸವಾಲಿನಿಂದ ಕೂಡಿರುವ ಕಾರಣ, ಕಂಪನಿಗೆ ಹೊಸ ರೂಪ ಕೊಡುವ ಪ್ರಕ್ರಿಯೆಯ ಭಾಗವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅದು ತಿಳಿಸಿದೆ.

ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿದ್ದು ಅತ್ಯಂತ ಕೆಟ್ಟ ತೀರ್ಮಾನವಾಗಿತ್ತು. ಆ ಹಂತದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದಾಗಿತ್ತು ಎಂದು ಕಂಪನಿಯ ಸಿಇಒ ಶ್ರೀಹರ್ಷ ಮಜೆಟಿ ಅವರು ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ವಜಾಗೊಂಡಿರುವ ಉದ್ಯೋಗಿಗಳ ಕ್ಷಮೆ ಯಾಚಿಸಿರುವ ಅವರು, ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿದ ಬಳಿಕ ಅತ್ಯಂತ ಕಠಿಣವಾದ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಆಹಾರ ವಿತರಣಾ ವಹಿವಾಟಿನ ಬೆಳವಣಿಗೆ ದರವು ಕಂಪನಿ ಅಂದುಕೊಂಡಿದ್ದಕ್ಕಿಂತ ಕಡಿಮೆ ಆಗಿದೆ. ಹೀಗಾಗಿ ಲಾಭದ ಗುರಿ ಸಾಧನೆಗಾಗಿ ಪರೋಕ್ಷ ವೆಚ್ಚಗಳನ್ನು ತಗ್ಗಿಸುವತ್ತ ಗಮನ ಹರಿಸುವ ಅಗತ್ಯವಿದೆ. ಮೂಲಸೌಕರ್ಯ, ಕಚೇರಿ ಇತ್ಯಾದಿಗಳಿಗೆ ಸಂಬಂಧಿಸಿದ ಪರೋಕ್ಷ ವೆಚ್ಚಗಳನ್ನು ತಗ್ಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನೌಕರರ ಮೇಲಿನ ಒಟ್ಟಾರೆ ವೆಚ್ಚವನ್ನೂ ಭವಿಷ್ಯದ ಗುರಿಗೆ ಅನುಗುಣವಾಗಿ ಹೊಂದಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ವಜಾ ಆಗಿರುವ ನೌಕರರಿಗೆ ಅವರ ಸೇವಾ ಅವಧಿ ಮತ್ತು ಶ್ರೇಣಿಗೆ ಅನುಗುಣವಾಗಿ ಮೂರರಿಂದ ಆರು ತಿಂಗಳವರೆಗಿನ ವೇತನ ನೀಡುವ ಯೋಜನೆಯನ್ನು ಕಂಪನಿಯ ಜಾರಿಗೊಳಿಸಿದೆ.

ಮೀಟರ್‌ ಮಾರ್ಕೆಟ್‌ಪ್ಲೇಸ್‌ ಅನ್ನು ಶೀಘ್ರವೇ ಮುಚ್ಚುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಇನ್‌ಸ್ಟಾಮಾರ್ಟ್‌ ಮೂಲಕ ಮಾಂಸ ವಿತರಣೆ ಮುಂದುವರಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT