ಬುಧವಾರ, ಮಾರ್ಚ್ 29, 2023
27 °C

ಟಾಫೆ ಕಂಪನಿಯಿಂದ ದುರಸ್ತಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟ್ರ್ಯಾಕ್ಟರ್‌ ತಯಾರಿಕಾ ಕಂಪನಿ ಟಾಫೆ ದೇಶದಾದ್ಯಂತ ತನ್ನ ಟ್ರ್ಯಾಕ್ಟರ್‌ಗಳಿಗೆ ನಿರ್ವಹಣಾ ಅಭಿಯಾನ ಆರಂಭಿಸಿದೆ. ಇದರ ಅಡಿಯಲ್ಲಿ ಕಂಪನಿಯು, ಕಡಿಮೆ ವೆಚ್ಚದಲ್ಲಿ ಟ್ರ್ಯಾಕ್ಟರ್‌ಗಳ ನಿರ್ವಹಣೆ, ದುರಸ್ತಿ ಮಾಡಿಕೊಡುವುದಾಗಿ ಹೇಳಿದೆ.

ದೇಶದಾದ್ಯಂತ ಒಂದೂವರೆ ಸಾವಿರಕ್ಕೂ ಹೆಚ್ಚಿನ ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಟ್ರ್ಯಾಕ್ಟರ್‌ ನಿರ್ವಹಣಾ ಸೇವೆ ಒದಗಿಸಲಾಗುತ್ತದೆ. ಬೇರೆ ಬೇರೆ ಸೇವೆಗಳಿಗೆ ರಿಯಾಯಿತಿಗಳು ಇವೆ. ಬಿತ್ತನೆ ಕಾರ್ಯಗಳಿಗೆ ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನು ಸಿದ್ಧಪಡಿಸಿ ಇರಿಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಟ್ರ್ಯಾಕ್ಟರ್‌ ಮಾಲೀಕರು ತಮ್ಮ ಸಮೀಪದ ಟಾಫೆ ಡೀಲರ್‌ಗಳನ್ನು ಸಂಪರ್ಕಿಸಬಹುದು. ಗ್ರಾಹಕರಿಗೆ ಮನೆಬಾಗಿಲಿನಲ್ಲಿ ಸೇವೆ ಪಡೆಯುವ ಅವಕಾಶವೂ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು