ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟರ್ಸ್ ಲಾಭ ₹3,783 ಕೋಟಿ

Published 2 ನವೆಂಬರ್ 2023, 13:11 IST
Last Updated 2 ನವೆಂಬರ್ 2023, 13:11 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹3,783 ಕೋಟಿ ನಿವ್ವಳ ಲಾಭ ಗಳಿಸಿದೆ.

ಮುಖ್ಯವಾಗಿ, ಜಾಗ್ವರ್‌ ಲ್ಯಾಂಡ್ ರೋವರ್‌ ಮಾರಾಟ ಉತ್ತಮವಾಗಿ ಇರುವುದೇ ಈ ಲಾಭಕ್ಕೆ ಕಾರಣ ಎಂದು ಕಂಪನಿ ತಿಳಿಸಿದೆ. ಕಂಪನಿಯು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹1,004 ಕೋಟಿ ಲಾಭ ಗಳಿಸಿತ್ತು.

ಕಾರ್ಯಾಚರಣಾ ವರಮಾನವು ₹79,611 ಕೋಟಿಯಿಂದ ₹1.05 ಲಕ್ಷ ಕೋಟಿಗೆ ಏರಿಕೆ ಕಂಡಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಜಾಗ್ವರ್ ಲ್ಯಾಂಡ್‌ ರೋವರ್‌ನ ವರಮಾನವು ಶೇ 30ರಷ್ಟು ಹೆಚ್ಚಾಗಿ ₹69,690 ಕೋಟಿಗೆ ತಲುಪಿದೆ. 

ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ತಯಾರಿಕೆ ಮತ್ತು ಸಗಟು ಮಾರಾಟವು ಹೆಚ್ಚಾಗುವ ನಿರೀಕ್ಷೆ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ಗಳಿಕೆಯು (ಇಬಿಐಟಿ) ಶೇ 8ಕ್ಕೆ ಏರಿಕೆ ಆಗುವ ನಿರೀಕ್ಷೆ ಮಾಡಲಾಗಿದೆ. ಈ ಮೊದಲು ಶೇ 6ಕ್ಕಿಂತ ಹೆಚ್ಚಿರುವ ಅಂದಾಜು ಮಾಡಲಾಗಿತ್ತು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT