ಶುಕ್ರವಾರ, ಜುಲೈ 1, 2022
21 °C

ಟಾಟಾ ವಾಹನಗಳ ಬೆಲೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಟಾಟಾ ಕಂಪನಿಯ ಕಾರು

ನವದೆಹಲಿ: ಬುಧವಾರದಿಂದ ಜಾರಿಗೆ ಬರುವಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಸರಾಸರಿ ಶೇಕಡ 0.9ರಷ್ಟು ಹೆಚ್ಚಿಸಲಾಗುವುದು ಎಂದು ಟಾಟಾ ಮೋಟರ್ಸ್ ಮಂಗಳವಾರ ತಿಳಿಸಿದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿರುವ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಮಾದರಿಯಿಂದ ಮಾದರಿಗೆ ಬೆಲೆ ಹೆಚ್ಚಳದಲ್ಲಿ ವ್ಯತ್ಯಾಸ ಇರಲಿದೆ. ಕೆಲವು ಮಾದರಿಗಳ ಮೇಲಿನ ಬೆಲೆಯನ್ನು ಕಂಪನಿಯು ₹ 10 ಸಾವಿರದವರೆಗೆ ಇಳಿಕೆ ಕೂಡ ಮಾಡಲಿದೆ. 

ಜನವರಿ 18ಕ್ಕಿಂತಲೂ ಮೊದಲು ಕಾರು ಬುಕ್ ಮಾಡಿದ್ದರೆ, ಬೆಲೆ ಹೆಚ್ಚಳವು ಅದಕ್ಕೆ ಅನ್ವಯ ಆಗುವುದಿಲ್ಲ. ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಹಿಂದಿನ ವಾರ ಗರಿಷ್ಠ ಶೇ 4.3ರವರೆಗೆ ಹೆಚ್ಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು