ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಾಟಾ ಸ್ಟೀಲ್‌, ಟೂಟರ್‌ ಒಪ್ಪಂದ

Last Updated 28 ಡಿಸೆಂಬರ್ 2022, 16:23 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಸ್ಟೀಲ್‌ ಮತ್ತು ಟೂಟರ್‌ ಹೈಪರ್‌ಲೂಪ್‌ ಕಂಪನಿಗಳು ಪರಸ್ಪರ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದು, ಹೈಪರ್‌ಲೂಪ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಅದನ್ನು ಅಳವಡಿಸಲು ಜಂಟಿಯಾಗಿ ಕೆಲಸ ಮಾಡಲಿವೆ.

ಪ್ರಯಾಣಕ್ಕೆ ಹಾಗೂ ಸರಕು ಸಾಗಣೆಗೆ ಹೈ‍ಪರ್‌ಲೂಪ್‌ ತಂತ್ರಜ್ಞಾನವು ಸುಸ್ಥಿರ ಹಾಗೂ ಕಡಿಮೆ ವೆಚ್ಚದ್ದು ಎಂಬ ನಂಬಿಕೆ ಇದೆ. ಇದು ವಾಯುಯಾನಕ್ಕಿಂತ ಕಡಿಮೆ ಅವಧಿ ತೆಗೆದುಕೊಳ್ಳುತ್ತದೆ ಎಂದು ಪ್ರಕಟಣೆ ತಿಳಿಸಿದೆ.

‘ಭವಿಷ್ಯದಲ್ಲಿ ಸುಸ್ಥಿರ ಸಾಗಾಟ ಕ್ಷೇತ್ರದಲ್ಲಿ ಹೈಪರ್‌ಲೂಪ್ ತಂತ್ರಜ್ಞಾನಕ್ಕೆ ಹೆಚ್ಚಿನ ಅವಕಾಶಗಳಿವೆ’ ಎಂದು ಟಾಟಾ ಸ್ಟೀಲ್ ಕಂಪನಿಯ ಹಿರಿಯ ಅಧಿಕಾರಿ ಡಾ. ದೇಬಶಿಶ್ ಭಟ್ಟಾಚಾರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT