ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಎಸ್‌ಟಿ ವಂಚನೆ ಆರೋಪ: ಇನ್ಪೊಸಿಸ್‌ಗೆ ನೀಡಿದ್ದ ನೋಟಿಸ್‌ ವಾಪಸ್‌

Published 2 ಆಗಸ್ಟ್ 2024, 14:22 IST
Last Updated 2 ಆಗಸ್ಟ್ 2024, 14:22 IST
ಅಕ್ಷರ ಗಾತ್ರ

ನವದೆಹಲಿ: ಸಮಗ್ರ ಜಿಎಸ್‌ಟಿ ವಂಚನೆಗೆ ಸಂಬಂಧಿಸಿದಂತೆ ಇನ್ಫೊಸಿಸ್‌ಗೆ ನೀಡಿದ್ದ ನೋಟಿಸ್‌ ಅನ್ನು ಹಿಂಪಡೆದಿರುವ ಸರಕು ಮತ್ತು ಸೇವಾ ತೆರಿಗೆಯ ಕರ್ನಾಟಕದ ವಿಭಾಗವು, ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯದ  (ಡಿಜಿಜಿಐ) ಕೇಂದ್ರ ವಿಭಾಗಕ್ಕೆ ಈ ಪ್ರಕರಣದ ಬಗೆಗಿನ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ಸರಕು ಮತ್ತು ಸೇವಾ ತೆರಿಗೆ, ಕೇಂದ್ರ ಅಬಕಾರಿ ಸುಂಕ ವಂಚನೆಗೆ ಸಂಬಂಧಿಸಿದಂತೆ ಕೇಂದ್ರ ಮಟ್ಟದ ಡಿಜಿಜಿಐ ತನಿಖೆ ನಡೆಸುತ್ತದೆ. ನೇರ ತೆರಿಗೆ ಕಾನೂನಿನಡಿ ಇದಕ್ಕೆ ಗುಪ್ತಚರ ಮತ್ತು ತನಿಖೆ ನಡೆಸುವ ಅಧಿಕಾರ ನೀಡಲಾಗಿದೆ. ಹಾಗಾಗಿ, ಈ ಪ್ರಕರಣವು ಈಗ ಡಿಜಿಜಿಐ ಅಂಗಳಕ್ಕೆ ವರ್ಗಾವಣೆಯಾಗಿದೆ. 

ವಿದೇಶಗಳಲ್ಲಿ ಇರುವ ಶಾಖೆಗಳ ಸೇವೆಗಳಿಗೆ ಸಂಬಂಧಿಸಿದಂತೆ ₹32,403 ಕೋಟಿ ಜಿಎಸ್‌ಟಿ ವಂಚನೆ ಎಸಗಿರುವ ಆರೋಪ ಇನ್ಫೊಸಿಸ್‌ ಮೇಲಿದೆ. ಈ ಬಗ್ಗೆ ಕರ್ನಾಟಕದ ವಿಭಾಗವು, ಷೋಕಾಸ್‌ ನೋಟಿಸ್‌ ಜಾರಿಗೂ ಮೊದಲು ವಿವರಣೆ ಕೇಳಿ ನೋಟಿಸ್‌ ನೀಡಿತ್ತು.

‘ನೋಟಿಸ್‌ ಹಿಂಪಡೆದಿರುವ ಕರ್ನಾಟಕ ವಿಭಾಗವು, ಈ ಪ್ರಕರಣದ ಬಗ್ಗೆ ಮುಂದಿನ ಪ್ರತಿಕ್ರಿಯೆಗಳನ್ನು ಕೇಂದ್ರ ವಿಭಾಗಕ್ಕೆ ಸಲ್ಲಿಸುವಂತೆ ಸೂಚಿಸಿದೆ’ ಎಂದು ಇನ್ಪೊಸಿಸ್‌, ಷೇರುಪೇಟೆಗೆ ತಿಳಿಸಿದೆ. 

‘ಯಾವುದೇ ಜಿಎಸ್‌ಟಿ ಬಾಕಿ ಉಳಿಸಿಕೊಂಡಿಲ್ಲ. ಕೇಂದ್ರ ಮತ್ತು ರಾಜ್ಯದ ನಿಯಮಾವಳಿಗಳನ್ನು ಪಾಲಿಸಿದೆ’ ಎಂದು ಕಂಪನಿಯು ಪ್ರತಿಕ್ರಿಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT