ಗುರುವಾರ , ಮೇ 13, 2021
19 °C

ಫ್ಲಿಪ್‌ಕಾರ್ಟ್‌ನಲ್ಲಿ ಥಾಮ್ಸನ್ ಏರ್ ಕೂಲರ್‌ಗೆ ವಿಶೇಷ ಆಫರ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Thomson

ಬೆಂಗಳೂರು: ಯುರೋಪ್‌ನ ಪ್ರಮುಖ ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಕಂಪನಿ ಥಾಮ್ಸನ್, ಭಾರತದ ಮಾರುಕಟ್ಟೆಗೆ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗಿದೆ.

ಥಾಮ್ಸನ್ ಇದೇ ಮೊದಲ ಬಾರಿಗೆ ವಿಂಡೋ ಮತ್ತು ಡೆಸರ್ಟ್ ಏರ್ ಕೂಲಿಂಗ್ ವ್ಯವಸ್ಥೆ ಹೊಂದಿರುವ ಏರ್ ಕೂಲರ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಏಪ್ರಿಲ್ 1, ಗುರುವಾರದಿಂದ ಫ್ಲಿಪ್‌ಕಾರ್ಟ್ ಮೂಲಕ ಥಾಮ್ಸನ್ ಏರ್ ಕೂಲರ್‌ಗಳು ಲಭ್ಯವಾಗಲಿದೆ. ಜಾಗತಿಕ ತಂತ್ರಜ್ಞಾನವನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ಒದಗಿಸುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಥಾಮ್ಸನ್ ಹೇಳಿಕೆ ನೀಡಿದೆ.

ಏರ್ ಕೂಲರ್‌ ಬೆಲೆ ದೇಶದಲ್ಲಿ ₹5,999 ನಿಂದ ಆರಂಭವಾಗಲಿದೆ ಎಂದು ಥಾಮ್ಸನ್ ಹೇಳಿದೆ. ಡೆಸರ್ಟ್ ಮತ್ತು ವಿಂಡೋ ಎಂಬ ಎರಡು ಮಾದರಿಗಳಲ್ಲಿ ಹೊಸ ಏರ್ ಕೂಲರ್ ಲಭ್ಯವಾಗಲಿದೆ.

ಅದರ ಜತೆಗೇ, ವಾಷಿಂಗ್ ಮಿಷನ್ ಅನ್ನು ಕೂಡ ಥಾಮ್ಸನ್ ಪರಿಚಯಿಸುತ್ತಿದ್ದು, 7 ಕೆಜಿ ಮಾದರಿಯ ಬೆಲೆ ₹7,499 ನಿಂದ ಆರಂಭವಾಗುತ್ತದೆ. ಭಾರತೀಯ ಕುಟುಂಬಗಳ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ರೂಪುಗೊಳಿಸಲಾಗಿದೆ ಎಂದು ಥಾಮ್ಸನ್ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು