ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಟನ್‌ ಐ–ಪ್ಲಸ್‌ನಿಂದ ವಿಶೇಷ ರಿಯಾಯಿತಿ ಪ್ರಕಟ

Published 25 ಏಪ್ರಿಲ್ 2024, 16:11 IST
Last Updated 25 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಕನ್ನಡಕ ತಯಾರಿಕಾ ಕಂಪನಿಯಾದ ಟೈಟನ್‌ ಐ–ಪ್ಲಸ್‌, ಆಕರ್ಷಕ ಫ್ರೇಮ್‌, ಲೆನ್ಸ್‌, ಸನ್‌ಗ್ಲಾಸಸ್‌ ಮತ್ತು ಕಾಂಟ್ಯಾಕ್ಟ್‌ ಲೆನ್ಸ್‌ ಮೇಲೆ ಬೇಸಿಗೆಯ ಆಕರ್ಷಕ ರಿಯಾಯಿತಿಯನ್ನು ಪ್ರಕಟಿಸಿದೆ.

₹750ಕ್ಕೆ ಫ್ಯಾಷನ್‌ ಫ್ರೇಮ್‌ ಮತ್ತು ಬ್ಲ್ಯೂ ಸೇಫ್‌ ಲೆನ್ಸ್‌, ₹500ಕ್ಕೆ ಆ್ಯಂಟಿ–ರಿಫ್ಲೆಕ್ಟಿವ್‌ ಲೆನ್ಸ್‌, ₹1,799ಕ್ಕೆ ಪ್ರೊಗ್ರೆಸ್ಸಿವ್‌ ಲೆನ್ಸ್‌ನಂತಹ ಬಹು ಮಾದರಿಯ ಲೆನ್ಸ್‌ಗಳ ಆಯ್ಕೆ ಸೌಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಬಾಲಕ ಮತ್ತು ಬಾಲಕಿಯರಿಗೆ ₹999ಕ್ಕೆ ಕನ್ನಡಕಗಳು ಲಭ್ಯವಿವೆ ಎಂದು ಹೇಳಿದೆ.

ಫ್ರೇಮ್‌ಗಳು ಜಿಯೂಮೆಟ್ರಿಕಲ್‌, ಸ್ಲಿಮ್‌, ಓವರ್‌ಸೈಜ್ಡ್‌, ಕ್ಯಾಟ್‌–ಐ, ಪಾರದರ್ಶಕ, ದುಂಡಗಿನ ಮತ್ತು ಚೌಕಾಕಾರದ ಶೈಲಿಯಲ್ಲಿವೆ. ಎಲ್ಲರ ಅಭಿರುಚಿಗೆ ತಕ್ಕಂತೆ ತಯಾರಿಸಲಾಗಿದೆ. 20ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು ವೈವಿಧ್ಯಮಯ ಆಯ್ಕೆಗಳ ಮೇಲೆ ಶೇ 20ರಷ್ಟು ರಿಯಾಯಿತಿ ಸೌಲಭ್ಯವಿದೆ ಎಂದು ತಿಳಿಸಿದೆ.

ಗ್ರಾಹಕರು ಕಂಪನಿಯ ಮಳಿಗೆ ಅಥವಾ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ ಎಂದು ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT