ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಪ್ಯಾಕಿಂಗ್‌ ಯಂತ್ರೋಪಕರಣ: ಏಪ್ರಿಲ್‌ 1ರೊಳಗೆ ನೋಂದಣಿ ಕಡ್ಡಾಯ

Published 4 ಫೆಬ್ರುವರಿ 2024, 13:51 IST
Last Updated 4 ಫೆಬ್ರುವರಿ 2024, 13:51 IST
ಅಕ್ಷರ ಗಾತ್ರ

ನವದೆಹಲಿ: ತಂಬಾಕು ಉತ್ಪನ್ನ ತಯಾರಕರು ತಮ್ಮ ಪ್ಯಾಕಿಂಗ್ ಯಂತ್ರೋಪಕರಣಗಳನ್ನು ಜಿಎಸ್‌ಟಿ ಪ್ರಾಧಿಕಾರದಲ್ಲಿ ಏಪ್ರಿಲ್‌ 1ರೊಳಗೆ ನೋಂದಾಯಿಸಬೇಕು. ಇಲ್ಲದಿದ್ದರೆ ₹1 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ.

ತಂಬಾಕು ಉತ್ಪಾದನಾ ವಲಯದಿಂದ ಬರುವ ಆದಾಯವು ಸೋರಿಕೆ ಆಗುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ನೋಂದಣಿ ಮಾಡದಿದ್ದರೆ ಅಂತಹ ಯಂತ್ರೋಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪಾನ್ ಮಸಾಲಾ, ಗುಟ್ಕಾ ಮತ್ತು ಅಂತಹ ಇತರ ಉತ್ಪನ್ನಗಳನ್ನು ತಯಾರಿಸುವ ಘಟಕಗಳ ಮೇಲೆ ನಿಗಾ ಇರಿಸಬೇಕು. ಅದಕ್ಕಾಗಿ ಪ್ಯಾಕಿಂಗ್‌ ಯಂತ್ರಗಳ ನೋಂದಣಿ ಇರಬೇಕು ಎಂದು ಹಿಂದಿನ ಸಭೆಯಲ್ಲಿ ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ ಎಂದು ರೆವೆನ್ಯೂ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ನೋಂದಾಯಿಸಲು ವಿಫಲವಾದರೆ ದಂಡ ವಿಧಿಸಬೇಕೆಂದು ಮಂಡಳಿ ನಿರ್ಧರಿಸಿದೆ ಎಂದು ಮಲ್ಹೋತ್ರಾ ಪಿಟಿಐಗೆ ತಿಳಿಸಿದರು. 

ಕಳೆದ ವರ್ಷ ಫೆಬ್ರುವರಿಯಲ್ಲಿ, ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಪಾನ್ ಮಸಾಲಾ ಮತ್ತು ಗುಟ್ಖಾ ವ್ಯವಹಾರಗಳಲ್ಲಿ ತೆರಿಗೆ ವಂಚನೆಯನ್ನು ತಡೆಗಟ್ಟುವ ಕುರಿತು ರಾಜ್ಯ ಹಣಕಾಸು ಸಚಿವರ ಸಮಿತಿಯು ನೀಡಿದ್ದ ವರದಿಯನ್ನು ಅನುಮೋದಿಸಿತ್ತು. ಅದರ ನಂತರ, ಸರ್ಕಾರವು ಹಣಕಾಸು ಮಸೂದೆ 2023ಕ್ಕೆ ತಿದ್ದುಪಡಿಗಳನ್ನು ತಂದಿತು. ಅದರ ಪ್ರಕಾರ, ತಂಬಾಕು ಉತ್ಪನ್ನಗಳ ಮೇಲೆ ಅವುಗಳ ಚಿಲ್ಲರೆ ಮಾರಾಟದ ಗರಿಷ್ಠ ದರದ ಆಧಾರದಲ್ಲಿ ಜಿಎಸ್‌ಟಿ ಪರಿಹಾರ ಸೆಸ್‌ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT