ಪ್ಯಾರಿಸ್: ಅದಾನಿ ಸಮೂಹದ ₹ 4.10 ಲಕ್ಷ ಕೋಟಿ ಮೊತ್ತದ ಹೈಡ್ರೊಜನ್ ಯೋಜನೆಯಲ್ಲಿ ಸದ್ಯದ ಮಟ್ಟಿಗೆ ಪಾಲುದಾರ ಆಗದಿರಲು ಫ್ರಾನ್ಸ್ನ ತೈಲ ಮತ್ತು ಇಂಧನ ಕಂಪನಿ ಟೋಟಲ್ ಎನರ್ಜೀಸ್ ನಿರ್ಧರಿಸಿದೆ.

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯು ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಅದಾನಿ ಸಮೂಹವು ಲೆಕ್ಕಪತ್ರ ಪರಿಶೀಲನೆ ನಡೆಸುತ್ತಿದೆ. ಅದರ ವರದಿಗಾಗಿ ಕಾಯುತ್ತಿರುವುದಾಗಿ ಟೋಟಲ್ ಎನರ್ಜೀಸ್ನ ಸಿಇಒ ಪ್ಯಾಟ್ರಿಕ್ ಪೊಯನ್ನೆ ಹೇಳಿದ್ದಾರೆ.

2022ರ ಜೂನ್ನಲ್ಲಿ ಅದಾನಿ ಸಮೂಹದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಲಾಗಿತ್ತು. ಆದರೆ, ಈವರೆಗೂ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ತಿಳಿಸಿದ್ದಾರೆ.

ಟೋಟಲ್ ಗ್ಯಾಸ್ ಮತ್ತು ಅದಾನಿ ಗ್ರೀನ್ ಎನರ್ಜಿಯಲ್ಲಿ ಕಂಪನಿ ಹೊಂದಿರುವ ಷೇರುಗಳ ಮೌಲ್ಯವು ಈ ಹಿಂದೆ ಖರೀದಿ ಮಾಡಿದ್ದಕ್ಕಿಂತಲೂ ಹೆಚ್ಚಿಗೆ ಇದೆ ಎಂದು ಪ್ಯಾಟ್ರಿಕ್ ಹೇಳಿದ್ದಾರೆ.

ಅದಾನಿ ಗ್ರೀನ್ ಕಂಪನಿಯು ನಾವು ಹೂಡಿಕೆ ಮಾಡಿದ್ದಕ್ಕಿಂತಲೂ ಎರಡುಪಟ್ಟು ಹೆಚ್ಚು ಮೌಲ್ಯಯುತವಾಗಿದೆ. ಅದಾನಿ ಗ್ಯಾಸ್ ಕಂಪನಿಯು ಎಂಟುಪಟ್ಟು ಹೆಚ್ಚು ಮೌಲ್ಯಯುತವಾಗಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.