ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೆಸ್ಟೀಜ್‌ ಪ್ರೆಷರ್‌ ಕುಕ್ಕರ್‌ಗೆ 75ರ ಸಂಭ್ರಮ

Published 10 ಮೇ 2024, 10:22 IST
Last Updated 10 ಮೇ 2024, 10:22 IST
ಅಕ್ಷರ ಗಾತ್ರ

ಬೆಂಗಳೂರು: ಟಿಟಿಕೆ ಸಮೂಹದ ಟಿಟಿಕೆ ಪ್ರೆಸ್ಟೀಜ್‌ ಲಿಮಿಟೆಡ್, ತನ್ನ ಪ್ರೆಷರ್‌ ಕುಕ್ಕರ್‌ನ 75ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.

ಇದರ ಅಂಗವಾಗಿ ‘75 ಸಾಲೋನ್‌ ಕಾ ಪ್ಯಾರ್‌ನ ಆಚರಣೆ’ ಎಂಬ ಶೀರ್ಷಿಕೆ ಅಡಿ  ಜಾಹೀರಾತನ್ನು ಪ್ರಾರಂಭಿಸಿದೆ. ಈ ಮೂಲಕ ಭಾರತೀಯ ಮನೆಗಳಲ್ಲಿ 75 ವರ್ಷಗಳ ಪ್ರೀತಿ, ವಿಶ್ವಾಸ ಹಾಗೂ ಕುಟುಂಬದ ಸಂಪ್ರದಾಯವನ್ನು ಜೀವಂತವಾಗಿಡುವುದರ ಚಿಹ್ನೆಯಾದ ಪ್ರೆಸ್ಟೀಜ್‌ ಪ್ರೆಷರ್‌ ಕುಕ್ಕರ್‌ನ ಇತಿಹಾಸವನ್ನು ಸೆರೆ ಹಿಡಿಯುವುದು ಬ್ರ್ಯಾಂಡ್‌ನ ಗುರಿಯಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಜಾಹೀರಾತು ಫ್ಲಿಪ್ ಆನ್ ಟ್ರೈಪ್ಲೈ, ಟ್ರೈಪ್ಲೈ ಪ್ರೆಷರ್ ಕುಕ್ಕರ್, ಸ್ವಚ್ಛ್ ಹಾರ್ಡ್ ಅನೋಡೈಸ್ಡ್ ಪ್ರೆಷರ್ ಕುಕ್ಕರ್, ನಕ್ಷತ್ರ ಆಲ್ಫಾ ಸ್ವಚ್ಛ್ ಮತ್ತು ನಕ್ಷತ್ರ ಡುಯೋ ಪ್ಲಸ್ ಸ್ವಚ್ಛ್ ಎಂಬ ಐದು ವಿವಿಧ ಪ್ರೆಷರ್ ಕುಕ್ಕರ್‌ಗಳನ್ನು ತೋರಿಸುತ್ತದೆ ಎಂದು ತಿಳಿಸಿದೆ.

ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್, ದೇಶದ ಗೃಹಿಣಿಯರ ಅಗತ್ಯಗಳನ್ನು ಪೂರೈಸುವ ಮೂಲಕ ಭಾರತದ ಅತಿದೊಡ್ಡ ಅಡುಗೆಮ ನೆ ಅಪ್ಲೈಯನ್ಸ್‌ಗಳ ಸಂಸ್ಥೆಯಾಗಿ ಹೊರಹೊಮ್ಮಿದೆ. ಪ್ರತಿಯೊಂದು ಪ್ರೆಸ್ಟೀಜ್ ಬ್ರ್ಯಾಂಡ್ ಉತ್ಪನ್ನವನ್ನು ಸುರಕ್ಷತೆ, ಬಾಳಿಕೆ ಮತ್ತು ವಿಶ್ವಾಸಾರ್ಹತೆಯ ಆಧಾರಸ್ತಂಭದ ಮೇಲೆ ತಯಾರಿಸಲಾಗಿದೆ ಎಂದು ಹೇಳಿದೆ.

‘ಇದೀಗ ಕಂಪನಿಯ ಪ್ರೆಷರ್ ಕುಕ್ಕರ್‌ಗಳು 75 ವರ್ಷ ಪೂರ್ಣಗೊಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿವೆ. ಪ್ರೆಷರ್‌ ಕುಕ್ಕರ್‌ನೊಂದಿಗೆ ಆರಂಭವಾದ ನಮ್ಮ ಪ್ರಯಾಣವು ದೇಶದೆಲ್ಲೆಡೆ ಗೃಹಿಣಿಯರು ಅಡುಗೆ ಮಾಡುವ ವಿಧಾನವನ್ನು ಬದಲಾಯಿಸಿದೆ. ಹೊಸ ಉತ್ಪನ್ನಗಳ ಮೂಲಕ ಗ್ರಾಹಕರನ್ನು ಮತ್ತಷ್ಟು ತಲುಪುತ್ತಿದ್ದೇವೆ’ ಎಂದು ಟಿಟಿಕೆ ಪ್ರೆಸ್ಟೀಜ್‌ನ ಮಾರ್ಕೆಟಿಂಗ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT