ಹೆಚ್ಚು ಕೆಲಸ ಮಾಡಿ, ಇಲ್ಲವೇ ಮನೆಗೆ ನಡೀರಿ: ಟ್ವಿಟರ್ ನೌಕರರಿಗೆ ಮಸ್ಕ್ ತಾಕೀತು

ನವದೆಹಲಿ: ಟ್ವಿಟರ್ ಸ್ವಾಧೀನದ ಬಳಿಕ ಅರ್ಧದಷ್ಟು ಉದ್ಯೋಗಿಗಳನ್ನು ವಜಾ ಮಾಡಿದ್ದ ನೂತನ ಮಾಲೀಕ ಇಲಾನ್ ಮಸ್ಕ್ ಇದೀಗ, ಹೆಚ್ಚು ಅವಧಿ ಕೆಲಸ ಮಾಡಿ ಇಲ್ಲವೇ ಮನೆಗೆ ನಡೀರಿ ಎಂದು ತಾಕೀತು ಮಾಡಿದ್ದಾರೆ.
‘ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿ ಇಲ್ಲವೇ ಕೆಲಸ ಬಿಡಿ‘ ಎಂದು ಟ್ವಿಟರ್ ನೌಕರರಿಗೆ ಹಾಕಿದ ಇಮೇಲ್ನಲ್ಲಿ ಮಸ್ಕ್ ಹೇಳಿದ್ದಾರೆ.
ಕೆಲಸದಲ್ಲಿ ಉಳಿಯಬೇಕಾದರೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಮಾಡಿ. ತೀವ್ರವಾಗಿ ಕೆಲಸ ಮಾಡಿ. ಟ್ವಟರ್ ಯಶಸ್ವಿಯಾಗಬೇಕಿದ್ದರೆ ಕಠಿಣ ಪರಿಶ್ರಮ ಪಡಬೇಕು‘ ಎಂದು ಅವರು ಹೇಳಿದ್ದಾರೆ.
ಇಮೇಲ್ಗೆ ಕಳಿಸಿರುವ ಲಿಂಕ್ ಮೂಲಕ ಸಂಜೆ 5 ಗಂಟೆ (ವಾಷಿಂಗ್ಟನ್ ಸಮಯ)ಯ ಒಳಗಾಗಿ ಉತ್ತರಿಸಿ ಎಂದು ಉದ್ಯೋಗಿಗಳಿಗೆ ನಿರ್ದೇಶನ ನೀಡಲಾಗಿದೆ.
‘ನೀವು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಿ, ಟ್ವಿಟರ್ ಅನ್ನು ಯಶಸ್ವಿಗೊಳಿಸುವ ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು‘ ಎಂದು ಮಸ್ಕ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.