ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿಯಲ್ಲಿ ಬಸ್ ಸಂಚಾರ ಪರವಾನಗಿ ಪಡೆದ ಉಬರ್

Published 20 ಮೇ 2024, 15:35 IST
Last Updated 20 ಮೇ 2024, 15:35 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಪ್ರೀಮಿಯಂ ಬಸ್ ಯೋಜನೆ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಸ್‌ಗಳನ್ನು ನಿರ್ವಹಿಸಲು ನವದೆಹಲಿಯ ಸಾರಿಗೆ ಇಲಾಖೆಯಿಂದ ಉಬರ್ ಪರವಾನಗಿಯನ್ನು ಪಡೆದಿದೆ.

ನವದೆಹಲಿಯು ಬಸ್ ಕಾರ್ಯಾಚರಣೆಗೆ ಪರವಾನಗಿ ನೀಡಿದ ಮೊದಲ ರಾಜ್ಯವಾಗಿದೆ. ಉಬರ್, ದೆಹಲಿ ಪ್ರೀಮಿಯಂ ಬಸ್ ಯೋಜನೆಯಡಿ ಪರವಾನಗಿ ಪಡೆದ ಮೊದಲ ಅಗ್ರಿಗೇಟರ್ ಆಗಿದೆ ಎಂದು ಕಂಪನಿ ತಿಳಿಸಿದೆ.

‘ರಾಷ್ಟ್ರರಾಜಧಾನಿಯಲ್ಲಿ ಬಸ್‌ಗಳಿಗೆ ಉಬರ್ ರೈಡ್‌ಗಳ ಅನುಕೂಲವನ್ನು ಅಧಿಕೃತವಾಗಿ ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ’ ಎಂದು ಉಬರ್ ಶಟಲ್ ಇಂಡಿಯಾ ಮುಖ್ಯಸ್ಥ ಅಮಿತ್ ದೇಶಪಾಂಡೆ ಹೇಳಿದ್ದಾರೆ.

ಉಬರ್‌ ಅಪ್ಲಿಕೇಶನ್‌ನಲ್ಲಿ ‘ಉಬರ್ ಶಟಲ್‌’ ಆಯ್ಕೆಯನ್ನು ಮಾಡಿಕೊಳ್ಳುವ ಮೂಲಕ ಗ್ರಾಹಕರು ತಮ್ಮ ಮಾರ್ಗದಲ್ಲಿ ಸೀಟುಗಳನ್ನು ಮುಂಗಡ ಕಾಯ್ದಿರಿಸಬಹುದಾಗಿದೆ. ಇದನ್ನು ಆರಂಭದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಪರೀಕ್ಷಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರಯಾಣಿಕರು ಒಂದು ವಾರದ ಮುಂಚಿತವಾಗಿ ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶವಿದೆ. ಬಸ್‌ ಇರುವ ಸ್ಥಳ ಮತ್ತು ಮಾರ್ಗವನ್ನು ಟ್ರ್ಯಾಕ್ ಮಾಡಬಹುದಾಗಿದ್ದು, ಅದರ ಬರುವಿಕೆಯ ನಿರೀಕ್ಷಿತ ಸಮಯವನ್ನು (ಇಟಿಎ) ಉಬರ್ ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದಾಗಿದೆ. ಪ್ರತಿ ಶಟಲ್ ವಾಹನವು 19-50 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT