ಮಂಗಳವಾರ, ಸೆಪ್ಟೆಂಬರ್ 27, 2022
27 °C

ಎಫ್‌ಡಿ ಬಡ್ಡಿ ಹೆಚ್ಚಿಸಿದ ಉಜ್ಜೀವನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, ಆಗಸ್ಟ್‌ 9ರಿಂದ ಅನ್ವಯ ಆಗುವಂತೆ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡ 0.30ರಿಂದ ಶೇ 1.5ರವರೆಗೆ ಹೆಚ್ಚಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ವಾರಗಳ ಮತ್ತು 75 ತಿಂಗಳುಗಳ ಅವಧಿಯ ಯೋಜನೆ ಪರಿಚಯಿಸಿದೆ. ಎರಡಕ್ಕೂ ಶೇ 7.5ರಷ್ಟು ಬಡ್ಡಿ ಸಿಗಲಿದೆ ಎಂದು ಬ್ಯಾಂಕ್‌ ಪ್ರಕಟಣೆಯಲ್ಲಿ ತಿಳಿಸಿದೆ.

990 ದಿನಗಳ ಅವಧಿಯ ಠೇವಣಿಗೂ ಶೇ 7.5ರ ಗರಿಷ್ಠ ಬಡ್ಡಿ ಸಿಗಲಿದೆ. ಹಿರಿಯ ನಾಗರಿಕರು ಶೇ 0.75ರಷ್ಟು ಹೆಚ್ಚುವರಿ ಬಡ್ಡಿದರ ಪಡೆಯಲಿದ್ದಾರೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.