ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ, ಕಾರ್ಪೊರೇಷನ್‌ ಬ್ಯಾಂಕ್‌ಗಳ ಐಎಫ್‌ಎಸ್‌ಸಿ ಕೋಡ್ ಬದಲು

Last Updated 12 ಮಾರ್ಚ್ 2021, 11:16 IST
ಅಕ್ಷರ ಗಾತ್ರ

ಮುಂಬೈ: ಆಂಧ್ರ ಬ್ಯಾಂಕ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಜೊತೆ ವಿಲೀನಗೊಂಡಿರುವ ಪರಿಣಾಮವಾಗಿ ಎರಡೂ ಬ್ಯಾಂಕ್‌ಗಳ ಐಎಫ್‌ಎಸ್‌ಸಿ ಕೋಡ್‌ಗಳು ಬದಲಾಗಿವೆ.

ಆದರೆ, ಗ್ರಾಹಕರ ಬ್ಯಾಂಕ್‌ ಖಾತೆ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಆಂಧ್ರ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್‌ ‘ಯುಬಿಐಎನ್‌08’ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್‌ ‘ಯುಬಿಐಎನ್‌09’ರಿಂದ ಆರಂಭವಾಗುತ್ತದೆ. ಬದಲಾದ ಐಎಫ್‌ಎಸ್‌ಸಿ ಮತ್ತು ಎಂಐಸಿಆರ್‌ ಕೋಡ್‌ಗಳನ್ನು ಹೊಂದಿರುವ ಹೊಸ ಚೆಕ್ ಬುಕ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.

ಐಎಫ್‌ಎಸ್‌ಸಿ ಕೋಡ್‌ ಪಡೆಯಲು ಗ್ರಾಹಕರು IFSC<OLD IFSC> ಎಂದು 09223008486 ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸುವಂತೆ ಅಥವಾ ಗ್ರಾಹಕರ ಸೇವಾ ಕೇಂದ್ರದ 1800–208–2244/1800–425–1515 ಸಂಖ್ಯೆಗಳಿಗೆ ಕರೆ ಮಾಡುವಂತೆ ಸೂಚಿಸಲಾಗಿದೆ. www.unionbankofindia.co.in ವೆಬ್‌ಸೈಟ್‌ಗೆ ಭೇಟಿ ನೀಡಿಯೂ ಐಎಫ್‌ಎಸ್‌ಸಿ ಕೋಡ್ ತಿಳಿದುಕೊಳ್ಳಬಹುದು.

ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ, ಮೊಬೈಲ್‌ ಆ್ಯಪ್‌ ಮೂಲಕ, ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಎಟಿಎಂ ಮೂಲಕ ಹೊಸ ಚೆಕ್‌ ಬುಕ್‌ಗೆ ಮನವಿ ಸಲ್ಲಿಸುವಂತೆ ಗ್ರಾಹಕರಿಗೆ ಯೂನಿಯನ್‌ ಬ್ಯಾಂಕ್‌ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT