ನವದೆಹಲಿ: ಬಾಸುಮತಿ ಅಕ್ಕಿ ರಫ್ತಿಗೆ ನಿಗದಿಪಡಿಸಿದ್ದ ಕನಿಷ್ಠ ರಫ್ತು ದರವನ್ನು (ಎಂಇಪಿ) ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
‘ರೈತರ ಕಲ್ಯಾಣದತ್ತ ಗಮನಹರಿಸುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬಾಸುಮತಿ ಅಕ್ಕಿಯ ಮೇಲಿನ ಕನಿಷ್ಠ ರಫ್ತು ದರವನ್ನು ರದ್ದುಗೊಳಿಸಲು ನಿರ್ಧರಿಸಿದೆ. ರಫ್ತು ದರವನ್ನು ರದ್ದುಪಡಿಸುವುದರಿಂದ ಬಾಸುಮತಿ ಅಕ್ಕಿ ಉತ್ಪಾದಿಸುವ ರೈತರಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯಲು ಅನುಕೂಲವಾಗುತ್ತದೆ. ಜತೆಗೆ, ಬಾಸುಮತಿ ಅಕ್ಕಿಯ ಬೇಡಿಕೆ ಹೆಚ್ಚಳದೊಂದಿಗೆ ರಫ್ತು ಕೂಡ ಹೆಚ್ಚಾಗುತ್ತದೆ ಎಂದು ಚೌಹಾಣ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರತಿ ಟನ್‌ಗೆ ₹79,678 ದರ ನಿಗದಿಪಡಿಸಲಾಗಿತ್ತು. ಇಡೀ ದೇಶದಲ್ಲಿಯೇ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬಾಸುಮತಿ ಅಕ್ಕಿ ಬೆಳೆಯಲಾಗುತ್ತದೆ.