ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಗುಣಮಟ್ಟ: ಮಾರಾಟವಾಗದ ಕಬ್ಬಿಣ ಅದಿರು

Last Updated 5 ಮೇ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ದುಬಾರಿ ದರ ಮತ್ತು ಕಳಪೆ ಗುಣಮಟ್ಟದ ಕಾರಣಕ್ಕೆ ಕರ್ನಾಟಕದಲ್ಲಿ 2018–19ನೆ ಸಾಲಿನಲ್ಲಿ 22 ಲಕ್ಷ ಟನ್‌ಗಳಷ್ಟು ಕಬ್ಬಿಣ ಅದಿರು ಮಾರಾಟವಾಗದೆ ಉಳಿದಿದೆ.

ಹಿಂದಿನ ವರ್ಷ ರಾಜ್ಯದಲ್ಲಿ 2.84 ಕೋಟಿ ಟನ್‌ಗಳಷ್ಟು ಕಬ್ಬಿಣ ಅದಿರು ಉತ್ಪಾದಿಸಲಾಗಿತ್ತು. ಅದರಲ್ಲಿ 2.62 ಕೋಟಿ ಟನ್‌ ಮಾತ್ರ ಮಾರಾಟವಾಗಿದ್ದು, 22 ಲಕ್ಷ ಟನ್‌ ಮಾರಾಟವಾಗದೆ ಉಳಿದಿದೆ ಎಂದು ಕರ್ನಾಟಕ ಕಬ್ಬಿಣ ಮತ್ತು ಉಕ್ಕು ತಯಾರಕರ ಸಂಘ (ಕೆಐಎಸ್‌ಎಂಎ) ತಿಳಿಸಿದೆ.

‘ದುಬಾರಿ ಬೆಲೆ ಮತ್ತು ಕಳಪೆ ಗುಣಮಟ್ಟದಿಂದ ಕಬ್ಬಿಣ ಅದಿರು ಮಾರಾಟವಾಗದೆ ಉಳಿದಿದೆ ಎಂದು ಸಂಘದ ಕಾರ್ಯದರ್ಶಿ ರಮಣ ಕುಮಾರ್‌ ಹೇಳಿದ್ದಾರೆ.

ಕಬ್ಬಿಣ ಅದಿರಿನ ಮುಕ್ತ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಮತ್ತು ಸ್ಥಳೀಯ ಅದಿರಿಗೆ ಆದ್ಯತೆ ನೀಡಬೇಕು ಎಂದು ಗಣಿಗಾರಿಕೆ ಅವಲಂಬಿಸಿದವರು ಸುಪ್ರೀಂಕೋರ್ಟ್‌ ನೇಮಿಸಿರುವ ಸಮಿತಿಗೆ ಇತ್ತೀಚಿಗೆ ಮನವಿ ಮಾಡಿಕೊಂಡಿದ್ದರು.

ಸುಪ್ರೀಂಕೋರ್ಟ್‌ ರಾಜ್ಯದಲ್ಲಿ 2011ರಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಿಷೇಧಿಸಿತ್ತು. ಆನಂತರ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಿ, ಉತ್ಪಾದನೆಗೆ ಮಿತಿ ವಿಧಿಸುವುದರ ಜತೆಗೆ ಕೆಲ ನಿಬಂಧನೆಗಳನ್ನು ಹೇರಿತ್ತು.

ಇದರಿಂದ ಸಣ್ಣ ಉದ್ದಿಮೆದಾರರು ಮತ್ತು ಟ್ರಕ್ ಮಾಲೀಕರು ಮತ್ತು ಚಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉದ್ಯೋಗ ನಷ್ಟ ಉಂಟಾಗಿ, ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ಕರ್ನಾಟಕ ಗಣಿ ಅವಲಂಬಿತರ ವೇದಿಕೆ (ಕೆಜಿಎವಿ) ಆರೋಪಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT