ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುಪಿಐ ಮೂಲಕ ಮೂರು ತಿಂಗಳಲ್ಲಿ ₹60 ಲಕ್ಷ ಕೋಟಿ ವಹಿವಾಟು

Published : 5 ಆಗಸ್ಟ್ 2024, 15:30 IST
Last Updated : 5 ಆಗಸ್ಟ್ 2024, 15:30 IST
ಫಾಲೋ ಮಾಡಿ
Comments

ನವದೆಹಲಿ: 2024–25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಯುಪಿಐ ವಹಿವಾಟು ಶೇ 36ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಖಾತೆ ಸಚಿವ ಪಂಕಜ್‌ ಚೌಧರಿ ಲೋಕಸಭೆಗೆ ಸೋಮವಾರ ತಿಳಿಸಿದ್ದಾರೆ.

ಜೂನ್‌ ತ್ರೈಮಾಸಿಕದಲ್ಲಿ ₹60 ಲಕ್ಷ ಕೋಟಿ ಮೌಲ್ಯದ 4,122 ಕೋಟಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ವಹಿವಾಟು ನಡೆದಿವೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 2,762 ಕೋಟಿ ವಹಿವಾಟು ನಡೆದಿದ್ದವು. ಇದರ ಮೊತ್ತ ₹44 ಲಕ್ಷ ಕೋಟಿಯಷ್ಟಾಗಿತ್ತು ಎಂದು ತಿಳಿಸಿದ್ದಾರೆ.

2023–24ರ ಪೂರ್ಣ ಹಣಕಾಸು ವರ್ಷದಲ್ಲಿ 13,113 ಕೋಟಿ ಯುಪಿಐ ವಹಿವಾಟು ನಡೆದಿದೆ. ಇದರ ಮೌಲ್ಯ ₹200 ಲಕ್ಷ ಕೋಟಿ ಆಗಿದೆ. 2022–23ರಲ್ಲಿ 8,371 ಕೋಟಿ ಮತ್ತು 2021–22ರಲ್ಲಿ 4,596 ಕೋಟಿ ವಹಿವಾಟು ನಡೆದಿವೆ. ಇದರ ಮೊತ್ತ ಕ್ರಮವಾಗಿ ₹139 ಲಕ್ಷ ಕೋಟಿ ಮತ್ತು ₹84 ಲಕ್ಷ ಕೋಟಿಯಷ್ಟಾಗಿತ್ತು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT