ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರೈಕೆ ವ್ಯವಸ್ಥೆ ಸುಧಾರಣೆ: ‘ಫ್ರೆಂಡ್‌ಶೋರಿಂಗ್‌’ಗೆ ಒತ್ತು

ಅಮೆರಿಕದ ಹಣಕಾಸು ಸಚಿವೆ ಜಾನೆಟ್ ಯೆಲನ್
Last Updated 25 ಫೆಬ್ರವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ಭಾರತವು ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಅಮೆರಿಕದ ಹಣಕಾಸು ಸಚಿವೆ ಜಾನೆಟ್ ಯೆಲನ್ ಹೇಳಿದ್ದು, ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ‘ಫ್ರೆಂಡ್‌ಶೋರಿಂಗ್‌’ ನೀತಿಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ.

ಜಿ20 ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆಯ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದ ತಂತ್ರಜ್ಞಾನ ಉದ್ದಿಮೆಗಳ ಪ್ರಮುಖರನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ವಲಯದಲ್ಲಿ ನಮ್ಮ ಒಪ್ಪಂದವನ್ನು ಬಲಪಡಿಸಲು ನಾನು ಉತ್ಸುಕಳಾಗಿದ್ದೇನೆ. ನಮ್ಮ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಲು ‘ಫ್ರೆಂಡ್‌
ಶೋರಿಂಗ್‌’ ನೀತಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇದಕ್ಕಾಗಿ ಭಾರತದಂತಹ ನಮ್ಮ ನಂಬಿಕಸ್ಥ ವ್ಯಾಪಾರ ಪಾಲುದಾರರೊಂದಿಗಿನ ಸಂಘಟನೆಯನ್ನು ಬಲಗೊಳಿಸಲಾಗುತ್ತಿದೆ. ಇದು ಪ್ರಗತಿಯಲ್ಲಿದೆ. ಆ್ಯಪಲ್‌ ಮತ್ತು ಗೂಗಲ್‌ ಕಂಪನಿಗಳು ತಮ್ಮ ಫೋನ್‌ ತಯಾರಿಕೆ
ಯನ್ನು ಭಾರತದಲ್ಲಿ ವಿಸ್ತರಣೆ ಮಾಡುತ್ತಿರುವುದು ಒಂದು ಉದಾಹರಣೆಯಷ್ಟೆ ಎಂದು ಮಾಹಿತಿ ನೀಡಿದ್ದಾರೆ.

ಸಮಾನ ಮನಸ್ಕ ದೇಶಗಳ ನಡುವೆ ಕಚ್ಚಾ ವಸ್ತುಗಳು ಮತ್ತು ಉತ್ಪನ್ನಗಳ ಕೊಡು–ಕೊಳ್ಳುವಿಕೆ ಹಾಗೂ ಅವುಗಳನ್ನು ಜಾಗತಿಕ ಮಾರುಕಟ್ಟೆಗೆ ವಿಸ್ತರಿಸುವುದನ್ನು ‘ಫ್ರೆಂಡ್‌ಶೋರಿಂಗ್’ ಎಂದು ಅಮೆರಿಕದ ಕರೆದಿದೆ.

ಭಾರತ ಮತ್ತು ಅಮೆರಿಕವು ಪರಸ್ಪರ ಅವಲಂಬಿತವಾಗಿವೆ. ಸಂವಹನ ನಡೆಸಲು ಭಾರತೀಯರು ವಾಟ್ಸ್‌ಆ್ಯಪ್ ಬಳಸುತ್ತಿದ್ದರೆ, ಅಮೆರಿಕದ ಕಂಪನಿಗಳು ಇನ್ಫೊಸಿಸ್ ಮೇಲೆ ಅವಲಂಬಿತವಾಗಿವೆ ಎಂದು ಯೆಲನ್‌ ತಿಳಿಸಿದ್ದಾರೆ.

ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ, ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪಟೇಲ್‌, ಇಂಟೆಲ್‌ ಇಂಡಿಯಾದ ಮುಖ್ಯಸ್ಥೆ ನಿವೃತಿ ರಾಯ್‌, ಫಾಕ್ಸ್‌ಕಾನ್‌ ಇಂಡಿಯಾದ ಮುಖ್ಯಸ್ಥ ಜೋಶ್‌ ಪೌಲ್ಗರ್‌ ಅವರು ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT