ನವದೆಹಲಿ: ಏರ್ಟೆಲ್ ಕಂಪನಿಯು ಜೂನ್ ತಿಂಗಳಿನಲ್ಲಿ 48.2 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯು ಈ ಅವಧಿಯಲ್ಲಿ 11.3 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ಇದೇ ಅವಧಿಯಲ್ಲಿ 45 ಲಕ್ಷ ಗ್ರಾಹಕರನ್ನು ಜಿಯೊ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.

ದೇಶದ ಒಟ್ಟಾರೆ ಮೊಬೈಲ್ ಗ್ರಾಹಕರ ಪ್ರಮಾಣದಲ್ಲಿ ಜೂನ್ ತಿಂಗಳಲ್ಲಿ ಶೇಕಡ 0.28ರಷ್ಟು ಇಳಿಕೆ ಕಂಡುಬಂದಿದೆ. ಈ ಇಳಿಕೆಯು ನಗರ ಪ್ರದೇಶಗಳಲ್ಲಿ ಶೇ 0.18ರಷ್ಟು, ಗ್ರಾಮೀಣ ಪ್ರದೇಶಗಳಲ್ಲಿ ಶೇ 0.40ರಷ್ಟು ಇದೆ ಎಂದು ಟ್ರಾಯ್ ಹೇಳಿದೆ. ಜೂನ್ ಅಂತ್ಯಕ್ಕೆ ಜಿಯೊ ಗ್ರಾಹಕರ ಒಟ್ಟು ಸಂಖ್ಯೆ 39.7 ಕೋಟಿಗೆ ಏರಿಕೆಯಾಗಿದೆ.

ಏರ್ಟೆಲ್ ಗ್ರಾಹಕರ ಸಂಖ್ಯೆ 31.6 ಕೋಟಿ ಆಗಿದೆ. ಇದರಲ್ಲಿ ಟಾಟಾ ಟೆಲಿಸರ್ವಿಸಸ್ನ ಗ್ರಾಹಕರೂ ಸೇರಿದ್ದಾರೆ. ಇದೇ ಅವಧಿಯಲ್ಲಿ ವಿಐಎಲ್ ಗ್ರಾಹಕರ ಸಂಖ್ಯೆ 30.5 ಕೋಟಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.